Posts

ಬಿರಿಯಾನಿಗೆ ಜಾತಿ, ಮತ ಎಲ್ಲಿದೆ?

Image
ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು ಇಷ್ಟಪಟ್ಟರೂ ಸೇವಿಸುವ ಆಹಾರ ಪದ್ಧತಿಯಾಗಿದೆ. ಆಹಾರ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ಮಾಂಸಹಾರವೇ ನಮ್ಮ ದೇಶದ ಮೂಲ ಆಹಾರ ಎಂದು ಗೊತ್ತಾಗುತ್ತದೆ. ಇತ್ತೀಚಿನ ಕೆಲವು ಆಹಾರ ಸಂಸ್ಕೃತಿಯು ಪಲ್ಲಟವಾಗುತ್ತಿರುವ ಆಹಾರ ರಾಜಕೀಯವಾಗುತ್ತಿರುವುದು ದುರಂತ. ಇಷ್ಟೆಲ್ಲಾ ಆಹಾರದ ಬಗ್ಗೆ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ... ಅನ್ನಪೂರ್ಣಿಯ ಬಗ್ಗೆ ಹೇಳಲು... ಅನ್ನಪೂರ್ಣಿ ನಯನತಾರ ಅಭಿನಯದ ಚಿತ್ರ ಒಟಿಟಿಯಲ್ಲಿ ಸದ್ದು, ಚರ್ಚೆಯಾಗುತ್ತಿರುವ ಸಿನಿಮಾ ನಾಯಕಿಯರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ತನಗೆ ಇಷ್ಟವಾದ ಕನಸನ್ನು ಕಲೆ ಹಾಕಿಕೊಂಡು ಭಾರತಕ್ಕೆ ಮಾಸ್ಟರ್ ಸೆಫ್ ಆಗಬೇಕು ಎಂದು ನೋಡುವ ಸಿನಿಮಾ... 

ಕವಿತೆ ಕೇಳಿ

https://open.spotify.com/episode/6QN8vt4Ae4KNwV45ElkJhm?si=ddViASqTQDeVJxb-b-oqmA ವೀಡಿಯೋ 

ಕಥಾ ಸಂವಿಧಾನ

Image
ಮಕ್ಕಳಿಗಾಗಿ ಸಂವಿಧಾನ ಪುಸ್ತಕದ ಕರಿತು                                ಲೇಖಕಿ : ವಾಣಿ ಪೆರಿಯೋಡಿ  ಈ ಪುಸ್ತಕವು ಮಕ್ಕಳಿಗೆ ಸಂವಿಧಾನವನ್ನು ಅರ್ಥ ಮಾಡಿಸಲು ಚಿಕ್ಕ ಚಿಕ್ಕ ಕತೆಯ ರೂಪದಲ್ಲಿ ಬರೆಯಲಾಗಿದೆ. ಪುಸ್ತಕ ಓದುವಾಗ ಬರುವ ಎಲ್ಲಾ ಕಥೆಗಳು ನಾವು ಶಾಲೆಯಲ್ಲಿ ಕೇಳಿದ ಪ್ರಶ್ನೆಗಳು ನೆನಪಾಗುತ್ತವೆ. ಚಿಕ್ಕವರಿದ್ದಾಗ ಸಾಕಷ್ಟು ಪ್ರಶ್ನೆಗಳು  ಪುಟ್ಟ ತಲೆಯಲ್ಲಿ ಓಡುತಿರುತ್ತವೆ.  ಆದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಸಿಗುವುದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಕೊಂಡಿರುತ್ತವೆ.  ಜಾತಿ ತಾರತಮ್ಯ ಮತ್ತು ಮೇಲು ಕೀಳು ಇದಕ್ಕೆ ಸಂಭಂದಿಸಿದಂತೆ ಮಕ್ಕಳ ಮನಸಿನಲ್ಲಿರು ಪ್ರಶ್ನೆಗಳಿಗೆ ಉತ್ತರಗಳು ಈ ಪುಸ್ತಕದಲ್ಲಿ ಸಿಗುತ್ತವೆ.  ಪುಸ್ತಕದಲ್ಲಿ ಒಟ್ಟು ೨೨ ಕಥೆಗಳಿವೆ ಪ್ರತಿ ಕತೆಯು ಪ್ರಶ್ನೆಯ ರೂಪದಲ್ಲಿಯೆ ಇವೆ.  ಎಲ್ಲಾ ಕತೆಗಳು ಮಕ್ಕಳಿಗೆ ಇಷ್ಟ ಆಗುವ ಹಾಗೆ ಸರಳವಾಗಿ ಇರುವುದರಿಂದ ಮಕ್ಕಳ ಮನಸ್ಸಿಗೆ ಬೇಗ ನಾಟುತ್ತವೆ.  ನಾವು ಶಾಲೆಯಲ್ಲಿ ಇದ್ದಾಗ ಕೆಲವು ಅನುಭವಗಳು ಆಗಿರುತ್ತವೆ. ದಲಿತರ ಮಕ್ಕಳು ದೂರ ಕುಳಿತುಕೊಳ್ಳುವುದು ಇಲ್ಲವಾದರೆ ಎಲ್ಲರ ಹಿಂದೆ ಕೊನೆಯಲ್ಲಿ ಕುಳಿತು ಕೊಳ್ಳುವುದು....

ಸುರ್ಪನಕಿ ರಾಕ್ಷಸಿಯೇ?

Image

ದೇಶವೆಂದರೆ

ದೇಶವೆಂದರೆ ಗಡಿಯಲ್ಲ  ಮಣ್ಣಲ್ಲ ಧರ್ಮವಲ್ಲ ದೇವರಲ್ಲ ತಿರಂಗ ದ್ವಜವಲ್ಲ…. ದೇಶವೆಂದರೆ… ಬಿಸಿಲು, ಗಾಳಿ, ಮಳೆಯನ್ನದೇ  ಅನ್ನ ಬೆಳೆವ  ಇಟ್ಟಿಗೆ ವೊತ್ತು ಕಟ್ಟಡ ಕಟ್ಟುವ  ಬೀದಿಯಲಿ ಕಸಗೂಡಿಸಿ  ಶುಚಿ ಕಾಪಾಡುವ  ಆಧುನಿಕತೆಯಲ್ಲೂ  ಮಲಬಾಚುವ  ಜೀವದಂಗು ತೊರೆದು  ನಮ್ಮನ್ನು ರಕ್ಷಿಸುವ… ಶ್ರಮಜೀವಿಗಳು    ಈ ದೇಶ… ದೇಶವೆಂದರೆ  ಸಂವಿಧಾನ….. ದೇಶವೆಂದರೆ ನಾನು…. ದೇಶವೆಂದರೆ ನೀನು…. ದೇಶವೆಂದರೆ ನಾವೆಲ್ಲರೂ…. - ಎಂ.ಕೆ.ಕೆಂಭಾವಿ

ಹುಟ್ಟು ಮತ್ತು ಸಾವುಗಳ ನಡುವೆ...

Image
" ಹುಟ್ಟು-ಸಾವುಗಳ ನಡುವಿನ ವೇಳೆಯನ್ನು ಬದುಕು ಎಂದು ಕರೆಯುತ್ತೇವೆ.  ಈ ಬದುಕು ಕಾಲಕ್ಕೆ ಸಂಬಂಧಿಸಿದ್ದು. ಕಾಲ ಕೇವಲ ಗಡಿಯಾರವನ್ನವಲಂಬಿಸಿಲ್ಲ; ನಾಡಿ ಬಡಿತವನ್ನು, ಬದುಕುವ ಆಶೆ ಮತ್ತು ಸಾವಿನ ಸಾಧ್ಯತೆಯನ್ನು ಅವಲಂಬಿಸಿದ್ದು... ಪಿ.ಲಂಕೇಶ್ ಕಾಲದ ಪ್ರಜ್ಞೆ ನೈತಿಕ ಮತ್ತು ಸಾಮಾಜಿಕವಾದದ್ದು. ನಾನು ತುಂಬ ಚಿಕ್ಕವನಾಗಿದ್ದಾಗ ಕಂಡುಕೊಂಡ ಸತ್ಯ ಇದು‌... ಕಾಲದ ಪರಿವೆ ಕೇವಲ ಸಾಮಾಜಿಕವಲ್ಲ, ಅದು ಒಬ್ಬ ವ್ಯಕ್ತಿ ಮತ್ತು ಗುಂಪು ತನ್ನಲ್ಲಿ ಇರುವ ಭೂತಕಾಲದ ನೆನಪುಗಳನ್ನು, ಮೌಲ್ಯಗಳನ್ನು ವರ್ತಮಾನಕ್ಕೆ ಹೊಂದಿಸಿ ಭವಿಷ್ಯ ಕಾಲದತ್ತ ಅಡಿ ಇಡುವ ರೀತಿ ಕೂಡ. ಭಾರತೀಯ ಈ ದೃಷ್ಟಿಯಲ್ಲಿ ಕೊಂಚ ದುರ್ಬಲ... ಕಾಲದ ಆಟ ವ್ಯಕ್ತಿಯಿಂದಲೇ ಶುರುವಾಗುತ್ತದೆ. ಆತ ತನಗೆ, ತನ್ನವರಿಗೆ ಎಂದು ರೂಪಿಸಿಕೊಳ್ಳುವ ಆಶಯಗಳೆಲ್ಲ ಆತನ ಒಳ ಮಾರ್ದವಗಳನ್ನು, ಆತನ ವ್ಯಕ್ತಿತ್ವದ ಸಾಧ್ಯತೆಗಳನ್ನು ಅವಲಂಬಿಸಿದೆ. ನಾನು ನಾಳೆಯ ಹೊತ್ತಿಗೆ, ಇಷ್ಟು ಗಂಟೆಗೆ ಮಾಡಬೇಕಾದ್ದನ್ನು ಮಾಡದಿದ್ದರೆ ಅದು ಆತ್ಮವಂಚನೆ. ತನ್ನ ವೇಳೆಗೆ ತಾನು ಮಾಡಿಕೊಂಡ ಮೋಸ. ಈ ವಂಚನೆಯಿಂದಲೇ ಸಾಮೂಹಿಕ ವೇಳೆಯ ಬಗ್ಗೆ ನಿರ್ಲಕ್ಷ್ಯ‌ ಶುರುವಾಗುತ್ತದೆ. ವರ್ತಮಾನದ ಕ್ರಿಯೆ ಮಂದವಾಗುತ್ತ ಹೋಗುತ್ತದೆ. ಕಾಲ, ದೇಶಕ್ಕೆ ವ್ಯಕ್ತಿಯ ಹೊಣೆ ತನ್ನ ಮೊನಚು ಕಳೆದುಕೊಳ್ಳುತ್ತದೆ. ಈ ಜಗತ್ತಿನಲ್ಲಿ ಏನಾದರೂ ಒಳ್ಳೆಯದು, ಮೌಲ್ಯ ಅನ್ನಿಸಿಕೊಳ್ಳುವಂಥದು ಉಳಿದಿದ್ದರೆ ಅದು ಸಮಯಕ್ಕೆ ಬದ್ಧವಾಗಿಯೇ ಉಳಿದಿದೆ; ಸೃಷ್ಟಿ...

ಮಹಿಳಾ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯವಿರಲಿ

ಅನಾದಿ ಕಾಲದಿಂದಲೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನೊಡಲಾಗುತ್ತಿದೆ. ಪುರುಷಾಧಿಪತ್ಯದಿಂದ ಕೂಡಿರುವ ನಮ್ಮ ದೇಶದಲ್ಲಿ ಮಹಿಳೆಯರನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದೆ ತಳ್ಳಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷವಾದರೂ ಮಹಿಳಾ ಸ್ವಾತಂತ್ರ ಗೌಣವಾಗಿದೆ. ಮಹಿಳೆಯರು ರಾಜಕೀಯ ಮತ್ತು ಸಾಮಾಜಿಕವಾಗಿ ಮುಂದುವರೆದಾಗ ಮಾತ್ರ ದೇಶದಲ್ಲಿ ಲಿಂಗ ಸಾಮಾನತೆ ಕಾಣಲು ಸಾಧ್ಯವಾಗುತ್ತದೆ. ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಪಾಲು ಮಹಿಳೆಯರದು, ಹಾಗಿದ್ದ ಮೇಲೆ ರಾಜಕೀಯದಲ್ಲಿ ಅರ್ಧದಷ್ಟು ಪಾಲು ಮಹಿಳೆಯರಿಗೆ ಮೀಸಲಾಆಗಿರಬೇಕಿತ್ತು, ಆದರೆ ಇಂದಿನ ರಾಜಕೀಯವನ್ನು ಗಮನಿಸಿದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಹಿಳೆಯರು ಕಾಣಿಸಿಕೊಳ್ಳುವುದು ಬೇಸರದ ಸಂಗತಿ. ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆಗೊಳಿಸಿದ್ದು, ಆ ಮೂಸೂದೆ ಜಾರಿಯಾದ ಸಮಯ ಮತ್ತು ಅದರಲ್ಲಿನ ಕೆಲವು ನಿರ್ಭಂಧಗಳನ್ನು ನೋಡಿದರೆ ಇದು ಮುಂಬರುವ ಲೋಕಸಭೆ ಚುನಾವಣೆಯ ಅಸ್ತ್ರವೆಂದು ಭಾಸವಾಗುತ್ತದೆ. ಅಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧೀಯವರು ಸಂವಿಧಾನಕ್ಕೆ 72 ಮತ್ತು 73 ನೇ ತಿದ್ದುಪಡಿ ತಂದು ಮಹಿಳಾ ಮೀಸಲಾತಿ ಜಾರಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನದಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ದೊರೆಯಿತು. ಇದೇ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ...

ನಾವು ಒಂದಾಗುತಿದ್ದೇವೆ

Image
ನೀವು ಬೆಂಕಿ ಹಚ್ಚಲು ಬಂದಿದ್ದೀರೆಂದು  ನಮಗೆ ಗೊತ್ತು  ಅದಕ್ಕೆ ನಾವು ತೊಯ್ದ ಬಟ್ಟೆ  ಹುಟ್ಟಿದ್ದೇವೆ.  ನಮ್ಮ ಹೊಟ್ಟೆಯ ಮೇಲೆ  ಹೊಡೆಯುತ್ತೀರೆಂದು ಗೊತ್ತು  ಹೊಟ್ಟೆ ಕಟ್ಟಿ ದುಡಿಯುತ್ತಿದ್ದೇನೆ.  ನೀವು ದ್ವೇಷ ಹರಡುತ್ತೀರೆಂದು ಗೊತ್ತು  ಅದಕ್ಕೆ ನಾವೂ ನಮ್ಮ ಹೃದಯದೊಳಗೆ  ಪ್ರೇಮಮಯ ಬುದ್ಧನನ್ನಿರಿಸಿಕೊಂಡಿದ್ದೇವೆ.  ನೀವೂ ನಮ್ಮ ಹಕ್ಕುಗಳನ್ನೂ ಕಸಿದುಕೊಳ್ಳುವಿರೆಂಬುದೂ ಗೊತ್ತು  ಅದಕ್ಕೆ ನಾವೂ ಕಾನೂನು ಮತ್ತೆ  ಸಂವಿಧಾನವನ್ನರಿಯುತಿದ್ದೇವೆ…  ನೀವು ಜಾತಿ ಭೇದ ಮಾಡುವುದೂ ಗೊತ್ತು  ಅದ್ಕೆ ನಾವು  ವಿಶ್ವ ಮಾನವರಾಗುವತ್ತ ಹೆಜ್ಜೆ ಇಡುತ್ತಿದ್ದೇನೆ.  ಕೊನೆಯ ಮಾತು ಕೇಳಿಸಿಕೊಳ್ರೋ  ನಿಮ್ಮ ಆಟಗಳೆಲ್ಲವೂ  ಅದಕ್ಕೆ ನಾವು ಒಂದಾಗುತಿದ್ದೇವೆ.  - ಮಾಳಿಂಗರಾಯ ಕೆಂಭಾವಿ

ಒಲವೆಂದರೆ ಹೀಗೆನಾ?

Image
ಒಲವೆಂದರೆ ಹೀಗೆನಾ?   ಹಸಿವಿಲ್ಲ  ನಿದ್ದಿಲ್ಲ  ನಿನ್ನ ನೆನವು ಬಿಟ್ಟು  ಬೇರೆನೂ ಇಲ್ಲ  ಒಲವೆಂದರೆ ಹೀಗೆನಾ?  ಹೊಗಳಬೇಕು  ತೆಗಳಬಕು ಬರಲೊಲ್ಲಲ್ಲದ ಕವಿತೆ  ಗೀಚಬೇಕು  ಒಲವೆಂದರೆ ಹೀಗೆನಾ?  ನಿನ್ದನಿಗಾಗಿ  ಕಾಯಬೇಕು  ಕೋಗಿಲೆ ಅಂತ  ವರ್ಣಿಸಬೇಕು  ಸಾಕಾಗುವಷ್ಟು ನೋಡಬೇಕು  ಕಾಣದಾಗ ಮರುಗಬೇಕು  ನೀ ಬಿಟ್ಟೋದಾಗ  ತಿರುಕನಂತೆ ತಿರುಗಬೇಕು  ಒಲವೆಂದರೆ ಹೀಗೆನಾ ?  ಒಲವೆಂದರೆ ಹೀಗೆನಾ? 

ನೀಲು ನನ್ನ ಸಾಹಿತ್ಯದ ಬಹುಪಾಲು...

Image
  ನೀಲು ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. ನೀಲು ಎಂಬ ಈ ಕಿರು  ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ‌.                         ದಿನಕ್ಕೆ ಒಂದಾದರು ನೀಲು ಕವಿತೆ ಓದಿದಾಗ ಮಾತ್ರ ನನಗೆ ಸಮಾಧಾನ ಸಿಗೋದು....ಎನ್ನುವಷ್ಟರ ಮಟ್ಟಿಗೆ ನನ್ನೊಂದಿಗೆ ನೀಲು ಆವರಿಸಿದ್ದಾಳೆ...   ಈ ಕವಿತೆಯನ್ನು ನಾನಷ್ಟೆ ಇಷ್ಟ ಪಡುತ್ತೇನಾ?  ಇಲ್ಲ. ಓದಿದ ಪ್ರತಿಯೊಬ್ಬರು ನೀಲುವನ್ನು ಮೆಚ್ಚಿದ್ದಾರೆ ಹಾಗೆಯೇ ಮೆಚ್ಚುತ್ತಾರೆ ಎನ್ನುವ ಭರವಸೆಯೂ ಇದೆ.  ಲಂಕೇಶರು ಪತ್ರಿಕೆ ನಡೆಸುತಿದ್ದಾಗ ದಿನಕ್ಕೊಂದು ನೀಲು ಕವಿತೆ ಅಚ್ಚು ಮಾಡುತಿದ್ದರು. ಎಷ್ಟೋ  ಜನ ಈ ಕವಿತೆಗಾಗಿಯೇ ಪತ್ರಿಕೆ ಓದಿದ ಉದಾಹರಣೆಗಳು ಇವೆ. ಹೊಸದೊಂದು ಓದುಗ ವರ್ಗವನ್ನೇ ಸೃಷ್ಟಿಸಿದ ಕೀರ್ತೀ ಲಂಕೇಶರ ನೀಲುವಿಗೆ ಸಲ್ಲುತ್ತದೆ. ಬರಿ  ಓದುಗ ವರ್ಗವನ್ನಷ್ಟೇ ಅಲ್ಲ ಎಷ್ಟೋ ಯುವ ಕವಿ / ಕವಯಿತ್ರಿಯರನ್ನೂ ಸೃಷ್ಟಿಸಿದೆ.   *ಏನಿದೆ ಈ ನೀಲುವಿನಲ್ಲಿ :*  ನನಗೆ ನಾನೆ ಈ ಪ್ರಶ್ನೆಯನ್ನ ಹಾಕಿಕೊಂಡರು ಬೇರೆಯವರು ಈ ಪ್ರಶ್ನೆ ಹಾಕಿದರು ನನ್ನ ಉತ್ತರ....ಏನಿಲ್ಲ ಎನ್ನುವ ಮರು ಪ್ರಶ್ನೆಯೇ...!!  ನೀಲು ಬಹಳ ಸರಳವಾಗಿ ಮೂಡಿಬಂದ ಸಾಲುಗಳು...ಇದರಲ್ಲಿ ಒಳಾರ್...

ಪ್ರೀತಿಯ ಸಂಗಾತಿ ಚೆ...

 ಪ್ರತಿ ಅನ್ಯಾಯದಲ್ಲೂ ನೀವು ಕೋಪದಿಂದ ನಡುಗಿದರೆ, ನೀವು ನನ್ನ ಒಡನಾಡಿ."      ಸಾಮ್ರಾಜ್ಯಶಾಹಿ ವಿರೋಧಿ, ಗೆರಿಲ್ಲಾ ಹೋರಾಟಗಾರ ಮತ್ತು ಕ್ಯೂಬನ್ ಕ್ರಾಂತಿಯ ನಾಯಕ ಅರ್ನೆಸ್ಟೊ “ಚೆ” ಗುವೇರಾ ಅವರ ಮಾತುಗಳು ಅವು. ಈ ಕಾರ್ಮಿಕ ವರ್ಗದ ನಾಯಕನನ್ನು ವಿಶ್ವಾದ್ಯಂತ ಕ್ರಾಂತಿಕಾರಿಗಳು ಮತ್ತು ತುಳಿತಕ್ಕೊಳಗಾದ ಜನರು ಪೂಜಿಸುತ್ತಾರೆ. ಚೆ ಜನಿಸಿದ್ದು ಜೂನ್ 14, 1928. ಸಿಐಎ ನಿರ್ದೇಶನದ ಬೊಲಿವಿಯನ್ ಸೈನಿಕರು ಅಕ್ಟೋಬರ್ 9, 1967 ರಂದು ಬೊಲಿವಿಯಾದ ಲಾ ಹಿಗುಯೆರಾದಲ್ಲಿ ಅವನನ್ನು ಗಲ್ಲಿಗೇರಿಸಿದರು. ಅಕ್ಟೋಬರ್ 18, 1967 ರಂದು ಕ್ಯೂಬನ್ ನಾಯಕ ಫಿಡೆಲ್ ಕ್ಯಾಸ್ಟ್ರೊ ತನ್ನ ದುಃಖಿತ ದೇಶಕ್ಕೆ ಹೀಗೆ ಹೇಳಿದರು: “ ಈ ಖಂಡದ ಶೋಷಿತರು ಮತ್ತು ತುಳಿತಕ್ಕೊಳಗಾದವರ ಕಾರಣವನ್ನು ಹೊರತುಪಡಿಸಿ ಬೇರೆ ಯಾವುದೇ ಆಸಕ್ತಿಯನ್ನು ಸಮರ್ಥಿಸಿಕೊಳ್ಳದೆ ಚೆ ನಿಧನರಾದರು.         ಚೆ ಜಗತ್ತಿಗೆ ಒಂದು ದೊಡ್ಡ ಪರಂಪರೆಯನ್ನು ಬಿಟ್ಟಿದ್ದಾರೆ. ಅವರು ತಮ್ಮ ಕ್ರಾಂತಿಕಾರಿ ಚಿಂತನೆ, ಅವರ ಕ್ರಾಂತಿಕಾರಿ ಸದ್ಗುಣಗಳು, ಚಿಂತನಾಶಕ್ತಿ, ಅವರ ಸ್ಥಿರತೆಯನ್ನು ನಮಗೆ ಬಿಟ್ಟರು. "ಚೆ ತನ್ನ ಅತ್ಯುನ್ನತ ಅಭಿವ್ಯಕ್ತಿ ಕ್ರಾಂತಿಕಾರಿ ಸ್ಟೊಯಿಸಿಸಂ, ತ್ಯಾಗದ ಮನೋಭಾವ ಹೋರಾಟ, ಕ್ರಾಂತಿಕಾರಿ ಕೆಲಸದ ಉತ್ಸಾಹಕ್ಕೆ ಒಯ್ಯಿತು. ಚೆ ಮಾರ್ಕ್ಸ್‌ವಾದ-ಲೆನಿನ್‌ವಾದದ ವಿಚಾರಗಳನ್ನು ಅವರ ತಾಜಾ, ಶುದ್ಧ, ಅತ್ಯಂತ ಕ್ರಾಂತಿಕಾರಿ ಅಭಿವ್ಯ...

ರೈತ ಆಂದೋಲನ ಐದು ವರ್ಷ ಮುಂದುವರೆಯಬಹುದು : ರಾಕೇಶ್ ಟಿಕಾಯತ್ , ರೈತ ಹೋರಾಟಗಾರ

Image
   ಕಳೆದ ಐದು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟವು ಮುಂದಿನ ಐದು ವರ್ಷಗಳವರೆಗೆ ಮುಂದುವರೆಯಬಹುದು ಎಂದು ಹೇಳಿರುವ ರೈತ ಮುಖಂಡ ರಾಕೇಶ್‌ ಟಿಕಾಯತ್‌, `ರೈತರು ಆಂದೋಲನವನ್ನು ತಮ್ಮ ದಿನನಿತ್ಯ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.  ರೈತ ಹೋರಾಟವನ್ನು ಬೆಂಬಲಿಸಿ ಹಿಸ್ಸಾರ್‌ನಲ್ಲಿ ಫೆಬ್ರವರಿ 3ರಿಂದ ವಕೀಲರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿದ್ದ ಟಿಕಾಯತ್‌ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.  `ಇದು ದೊಡ್ಡ ಆಂದೋಲನವೇ? ನಾವು ಕಳೆದ ಐದು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅವರು ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸಲು ಸಾಧ್ಯವಾದರೇ, ಆಂದೋಲವನ್ನು ಐದು ವರ್ಷ ಮುಂದುವರೆಸಲು ಏಕೆ ಸಾಧ್ಯವಿಲ್ಲ? ನಮ್ಮ ಆಂದೋಲನವೂ ಐದು ವರ್ಷಗಳವರೆಗೆ ಮುಂದುವರೆಯುತ್ತದೆ’ ಎಂದು ಮಾಧ್ಯಮದವರಿಗೆ ತಿಳಿಸಿದರು.  `ಈ ಆಂದೋಲನವು ಇಡೀ ದೇಶದಲ್ಲಿ ಇನ್ನಷ್ಟು ಬಲಿಷ್ಠವಾಗಿ ಮುಂದುವರೆಯುತ್ತದೆ. ರೈತರು ತಮ್ಮ ಕೃಷಿ ಭೂಮಿ ಮತ್ತು ಆಂದೋಲನ ಎರಡರ ಬಗ್ಗೆಯೂ ಗಮನಹರಿಸಬೇಕು. ಅವರು ಕೃಷಿಯನ್ನು ಮಾಡಬೇಕು, ಹೋರಾಟದಲ್ಲಿಯೂ ಭಾಗವಹಿಸಬೇಕು’ ಎಂದರು.  ಹಿಸ್ಸಾರ್‌ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಟೋಲ್‌ ಪ್ಲಾಜಾದಲ್ಲಿ ನಡೆದ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್‌ ಹೋರಾಟ ಮುಂದುವರೆಯುವುದಾಗಿ ಭಾವನೆ ವ್ಯಕ್ತಪಡಿಸಿದ್ದಾರೆ.  ರೈತ ಹೋ...

ಮಂಜುನಾಥ ಮಂಜಮ್ಮನಾದದ್ದು...

 ಗಂಡಸಾಗಿ ಹುಟ್ಟಿ ಹೆಣ್ಣಿನ ರೂಪ ಪಡೆಯುವುದೆಂದರೆ ಸಾಮಾನ್ಯವಾದ ಮಾತಲ್ಲ ಆದರೂ ಅನೇಕರು ತಾವು ಹುಟ್ಟಿದ ಲಿಂಗವನ್ನು ತೊರೆದು ಲಿಂಗ ಪರಿವರ್ತನೆಯಾದ ಹಲವಾರು ಉದಾಹರಣೆಗಳನ್ನು ಕಾಣಬಹುದು. ಅಂತವರಲ್ಲಿ ಮಂಜಮ್ಮ ಜೋಗತಿ ಒಬ್ಬರು ಇವರು ಹುಟ್ಟಿದ್ದು ಗಂಡಸಾಗಿ ಮೂಲ ಹೆಸರು ಮಂಜುನಾಥ ಎಂದು ಅವರು ಹುಟ್ಟಿದ ಲಿಂಗದ ಮೇಲೆ ಅವರಿಗೆ ಅಸಮಧಾನವಿರುವಂತೆ ಕಾಣುತ್ತದೆ. ಹೆಣ್ಣಿನನಂತೆ ಇರಬೇಕು ಎಂದು ಕನಸು ಕಾಣುತಿದ್ದ ಮಂಜುನಾಥ ಸಂಪೂರ್ಣ ಹೆಣ್ಣಿನ ತರಹ ಬದಲಾಗ ತೊಡಗಿದ ಅಮ್ಮ ಅಡುಗೆ ಮಾಡುವಾಗ ಅವರಿಗೆ ಸಹಾಯ ಮಾಡುವುದು, ರಂಗೋಲಿ ಬಿಡುವುದು , ಶಾಲೆಯಲ್ಲಿ ಹೇಳಿದ ನೋಟ್ಸ್ ಗಳನ್ನು ಹುಡುಗಿಯರ ಹತ್ತರವೇ ತೆಗೆದು ಕೊಳ್ಳುವುದು ಅವರ ಜೊತೆಯಲ್ಲಿಯೇ ಆಟ ಆಡುವುದು ಇತ್ಯಾದಿಗಳನ್ನು ಮಾಡುತಿದ್ದರು..ಇನ್ನೂ ತುಂಬಾ ಸುಲಭವಾಗಿ ಹೇಳಬೇಕೆಂದರೆ ಒಂದು ಹೆಣ್ಣಿಗೆ ಮೂಡುವ ಭಾವನೆಗಳು ಮೂಡತೊಡಗಿದವು ಹಾಗೆ ದೇಹದಲ್ಲಿಯೂ ಕೆಲವಷ್ಟು ಪರಿವರ್ತನೆಗಳಾಗತೊಡಗಿದವು. ಮಗನ್ನು ಹೇಗಾದರೂ ಮಾಡಿ ಸರಿಮಾಡಬೇಕೆಂದು ಆಸ್ಪತ್ರೆ ದೇವರು ದಿಂಡಿರು ಇತ್ಯಾದಿ ಪ್ರಯತ್ನಗಳು ಮಾಡಿದರೂ ಅದರಿಂದ ಯಾವುದೇ ಉಪಯೋಗವಾಗಲಿಲ್ಲ. ಇವನ್ನೆಲ್ಲವನ್ನು ನೋಡಿದ ತಂದೆ ತಾಯಿಗೆ ಬೇಸರವಾಗಿ ಬೈಯುವುದು ಹೊಡೆಯುವುದ ಮಾಡುತಿದ್ದರು. ಮಂಜುನಾಥನಲ್ಲಿ ಹೇಗೆ ಬದಲಾವಣೆಗಳು ಆಗುತಿದ್ದವೋ ಹಾಗೆ ಸಮಾಜದಲ್ಲಿ ಅವರನ್ನು ನೋಡುವ ರೀತಿ ನೀತಿಗಳು ಬದಲಾಗತೊಡಗಿದವು. ನಂತರದ ದಿನಗಳಲ್ಲಿ ಮಂಜುನಾಥ ಏನು ಮಾಡಿದರೂ ಬದಲಾಗುವುದ...

ರೈತರು ಶಾಂತಿ ಪ್ರಿಯರು ನೀವು ಹಿಟ್ಲರ್ ತಾರೆ ಆಗಿದ್ದೀರಿ

Image
 ಗಣರಾಜ್ಯೋತ್ಸವ ದಿನವಾದ ಇಂದು...ರೈತರು ಸ್ವಾತಂತ್ರ್ಯ ಚಳುವಳಿಯನ್ನು ಮತ್ತೆ ನೆನಪಿಸಿದ್ದಾರೆ. ಸುಮಾರು ಎರಡೂವರೆ ತಿಂಗಳಿನಿಂದ ರೈತರು ದೆಹಲಿಯಲ್ಲಿ ಶಾಂತಿಯುತವಾಗಿಯೇ ಹೋರಾಟ ಮಾಡುತ್ತಾ...ಬಂದಿದ್ದಾರೆ...ಆದರೇ ಹೊಟ್ಟೆಗೆ ಹೇಲು ತಿನ್ನುವ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಬಹಳಷ್ಟು ಪ್ರಯತ್ನ ಮಾಡಿದೆ...ರೈತರನ್ನು ನಕ್ಸಲೈಟ್, ಉಗ್ರರು ಇತ್ಯಾದಿ ಪದಗಳಿಂದ ಕರೆದಿದ್ದಾರೆ...ಅವರು ಮೇಲೆ ಟ್ಯಾಂಕರ್ ಪ್ರಯೋಗ, ಕೂಡ ಮಾಡಿದ್ದರೂ ರೈತರು ತಮ್ಮ ಶಾಂತಿಯನ್ಧು ಕಳೆದು ಕೊಂಡಿಲ್ಲ...ಯಾಕೆಂದರೆ ಅವರೆಲ್ಲ ಮಾನವುಳ್ಳವರು ಸರ್ಕಾರದ ಹಾಗೆ ಮತ್ತು ರಾಜಕೀಯ ವ್ಯಕ್ತಿಗಳ ಹಾಗೆ ಬಂಡವಾಳಶಾಹಿಗಳ ಎಂಜಲು ತಿನ್ನುವ ಮಾನಗೇಡಿಗಳಲ್ಲ...                             ಇವತ್ತು ಭಾರತದ ಪಾಲಿಗೆ ನಿಜವಾದ ಗಣತಂತ್ರವನ್ನು ಆಚರಿಸಿದಂತಾಗಿದೆ. ರೈತರು ತಮ್ಮ ಹಕ್ಕುಗಳ್ಳನ್ನು ವಿಶೇಷವಾಗಿ ಕೇಳಿದ್ದಾರೆ...ಇವತ್ತೂ ಸಹ ಕೆಂಪುಕೋಟೆಗೆ ಮುತ್ತಿಗೆ ಹಾಕಲು ಮತ್ತು ಟ್ರ್ಯಾಕ್ಟರ್ ಪೇರೇಡ್ ಅನ್ನು ತಡೆಯುವ ಎಲ್ಲಾ ಪ್ರಯತ್ನಗಳು ನಡೆದಿವೆ ಆದರೆ ಛಲಬಿಡದ ರೈತರು ಪೋಲಿಸ್ ಬ್ಯಾರೀಕೇಡ್ಗಳನ್ನು ತಳ್ಳಿ ಲಾಠಿ ಏಟು ತಿಂದು ಮುನ್ನುಗ್ಗಿದ್ದಾರೆ... ಕರ್ನಾಟಕ ದಲ್ಲಿಯೂ ದೆಹಲಿ ಮಾದರಿಯ ಟ್ರ್ಯಾಕ್ಟರ್ ಪೆರೇಡ್ ನಡೆಯಿತು. ಇಲೊಲಿಯು ಸಹ ಕೆಲವು ಟ್ರ್ಯಾಕ್ಟರ್ ಮತ್ತು ರೈತ ಹೋರಾಟಗಾರರನ್ನು ಅಲ್ಲ...

ರೈತರ ಆತ್ಮಹತ್ಯೆಗೆ ಕೊನೆಯೆಂದು..?

Image
  ರೈತರ ಆತ್ಮಹತ್ಯೆಗೆ ಕೊನೆಯೆಂದು..? ಮಾಡಿಲ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ರೈತರನ್ನು ನಾವು ನೋಡಿದ್ದೇವೆ ಇದು ಪ್ರಬುತ್ವಕ್ಕೆ ನಾಚಿಕೆಗೇಡಿನ ಸಂಗತಿ. ಯಾವುದೇ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಯಾವೊಬ್ಬ ರೈತನೂ ಆತ್ಮಹತ್ಮೆ ಮಾಡಿಕೊಳ್ಳ ಬಾರದು. ರೈತ ತನಗಾಗಿ ಮಾತ್ರ ಉಳುಮೆ ಮಾಡಿ ಅನ್ನ ನೀಡುವುದಿಲ್ಲ ಇಡಿ ದೇಶಕ್ಕೆ ಅನ್ನ ನೀಡುತ್ತಾನೆ. ಇಂತ ರೈತ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಏನರ್ಥ..? ನಿನ್ನೆಯ ವಾರ್ತಾ ಭಾರತಿ ದಿನ ಪತ್ರಿಕೆಯನ್ನು ಕೈಗೆತ್ತಿಕೊಂಡಾಕ್ಷಣ ಮುಖ ಪುಟದ ದಪ್ಪಕ್ಷರದಲ್ಲಿ ಬರೆದ ಹೆಡ್ ಲೈನ್ ನನಗೆ ತುಂಬಾ ಬೇಸರ ತರಿಸಿತು ಒಂದು ಕ್ಷಣ ಯೋಚಿಸಿದೆ. ಪ್ರಜಾ ಪ್ರಭುತ್ವ ಎಂದರೆ ಇದೆನಾ... ಯಾವುದೇ ಒಂದು ಕಾಯಿದೆ ಅಥವಾ ಕಾನೂನು ಸರ್ಕಾರ ಜಾರಿಗೊಳಿಸುತಿದೆ ಎಂದರೆ ಅದರಿಂದ ಪ್ರಜೆಗಳಿಗೆ ಏನಾದ್ರೂ ಉಪಯುಕ್ತವಾಗ ಬೇಕು.. ಅದನ್ನು ಕುರಿತು ಜನರಲ್ಲಿ ಅರಿವು ಮೂಡಿಸಿ ಜಾರಿಗೆ ತರುವುದು ಪ್ರಜಾ ಪ್ರಭುತ್ವದ ಲಕ್ಷಣ.. ಒಂದು ವೇಳೆ ಸರ್ಕಾರ ಮಾಡುವ ಕಾನೂನನ್ನು ಜನತೆ ವಿರೋಧಿಸಿದರೆ ಅದನ್ನು ಕೋಡಲೇ ಕೈ ಬಿಡಬೇಕು ಈ ರೀತಿ ಮಾಡಿದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಉಳಿಯಲಿಕ್ಕೆ ಸಾಧ್ಯ.. ತಿಂಗಳುಗಟ್ಟಲೇ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತಿದ್ದರೂ ಸರ್ಕಾರ ರೈತರ ಕೂಗನ್ನು ಧಿಕ್ಕರಿಸುತ್ತಲೇ ಇದೆ... ಸಮಾಧಾನಕ್ಕಾಗಿ ಪದೇ ಪದೇ ಸಂಧಾನಕ್ಕೆAದು ಕರೆಯುವುದು ನಾಟಕೀಯ ರೀತಿಯಾಗಿದೆ. ...

ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಬಾಬಾಸಾಹೇಬ್ ಅಂಬೇಡ್ಕರರ ಆಕ್ರೋಶದ ಮಾತು ಹೇಗಿತ್ತೆಂದರೆ* ..!?

1947 ಜನವರಿ ತಿಂಗಳ ಒಂದು ದಿನ “ಸಂವಿಧಾನ ಸಭೆ” (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ “ಅಲ್ಪಸಂಖ್ಯಾತರ ಉಪಸಮಿತಿ”ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ “ಅಲ್ಪಸಂಖ್ಯಾತರ ಉಪಸಮಿತಿ” ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ “ಹಿಂದೂಸ್ತಾನ್ ಟೈಮ್ಸ್” ಮತ್ತು “ಸ್ಟೇಟ್ಸ್ ಮನ್” ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ ಕೆಂಪಕ್ಷರಗಳಲ್ಲಿ ಬರೆದಿಡುವ ದಿನ) ಎಂದು!! ಅಂದರೆ ಮೀಸಲಾತಿ ...

ನಿನ್ನಾಣೆ...

  ನಿನ್ನಾಣೆ ನಿನ್ನ ಹೊರತು ಬೇರಾವ ನಾರಿಯನ್ನೂ ಕಣ್ಣೆತ್ತಿ ನೋಡಿಲ್ಲ ಎನ್ನುವವನ ಕಣ್ತುಂಬ  ಪರನಾರಿಯರದೇ ಪ್ರತಿಬಿಂಬ... #ಎಂ.ಕೆ.ಕೆಂಭಾವಿ

ಹಿಂದಿ ಭಾಷಾ ಹಿನ್ನೆಲೆ

 ಇತ್ತೀಚೆಗೆ ಹಿಂದಿ ಭಾಷೆ ಅನ್ನುವುದು ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಅದು ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆಗೆ ವ್ಯಕ್ತವಾದ ವಿರೋಧ ಆಗಿರಬಹುದು ಅಥವ ಸರ್ಕಾರಿ ಬ್ಯಾಂಕು ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಅಧಿಕಾರಿಗಳ ಕಿರಿಕಿರಿ ಇರಬಹುದು, ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮುದ್ರಣವಾಗಿದ್ದರ ಬಗ್ಗೆ ಇರಬಹುದು ಅಥವ ಕೇಂದ್ರ ಸರ್ಕಾರ ಹಿಂದಿ ಬಳಕೆ ಬಗ್ಗೆ ತೋರುತ್ತಿರುವ ಅತಿ ಉತ್ಸಾಹವೇ ಇರಬಹುದು, ಒಟ್ಟಿನಲ್ಲಿ ಕನ್ನಡಿಗರಲ್ಲಿ ಮತ್ತು ಒಂದುಮಟ್ಟಿಗೆ ಇಡೀ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಹಿಂದಿ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ ಹಿಂದಿ ಭಾಷೆ, ಅದರ ಇತಿಹಾಸ, ಸಾಹಿತ್ಯ, ವ್ಯಾಪಕತೆ ಮತ್ತು ಮಹತ್ವದ ಬಗ್ಗೆ ಸ್ಪೆಷಲ್ ರಿಪೋರ್ಟರ್ ನಿಂದ ಒಂದು ವಿಶೇಷ ವರದಿ. ಭಾರತ ಹಲವು ಭಾಷೆಗಳ ದೇಶ. ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ, ಒಟ್ಟಾರೆ 22 ಅಧಿಕೃತ ಭಾಷೆಗಳಿವೆ. ಇವಲ್ಲದೆ ದೇಶದಲ್ಲಿ 1600ಕ್ಕೂ ಹೆಚ್ಚು ಉಪಭಾಷೆಗಳಿವೆ. ಭಾರತದ ಸಂವಿಧಾನ ಯಾವುದೇ ಭಾಷೆಯನ್ನು ಭಾರತದ ರಾಷ್ಟ್ರಭಾಷೆ ಎಂದು ಗುರುತಿಸಿಲ್ಲ, ಹೀಗಾಗಿ ಹಿಂದಿ, ಭಾರತದ ರಾಷ್ಟ್ರ ಭಾಷೆಯಲ್ಲ. ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕೆಲವರು ಅದನ್ನು ಹಿಂದಿಯನ್ನು ರಾಷ್ಟ್ರಭಾಷೆ ಎಂದು ತಪ್ಪಾಗಿ ಹ...

ಕನ್ನಡ ❤️ ಹೃದಯ

 ಕನ್ನಡದ ಹೊರತು  ಏನಿದಿಯೋ ಅಣ್ಣಾ... ಹಿಂದಿ ಇಂಗ್ಲೀಷು ಬರಿ ಬಂಡವಾಳದ ಬಣ್ಣಾ...  ಕನ್ನಡ ಬರಿ ಭಾಷೆಯಲ್ಲೋ...ಅಣ್ಣಾ  ನಿನ್ನ ನನ್ನ ಗುರುತು ಅಳಿದ ಸಾಮ್ರಾಜ್ಯ ಉಳಿದ ಮನಸುಗಳಲಿ  ಕಂಪಿಸುವುದು ಕನ್ನಡ ಜನಮಾನಸ ತುಡಿತ ಮಿಡಿತಗಳ ಹೃದಯದೊಳಗೆ ಚಿ ಜ್ಯೋತಿಯಾಗಿಹುದು ಕನ್ನಡ... ಪಂಪ , ಕುಮಾರವ್ಯಾಸ, ಕುವೆಂಪು , ಬಸವಗಲ್ಲದೆ ಅನಕ್ಷರಸ್ಥ ಅಜ್ಜನಿಗೂ ಒಗ್ಗುವುದು  ನನ್ನೀ...ಕನ್ನಡ...                                       ~ಎಂ.ಕೆ.ಕೆಂಭಾವಿ
ಅಂಬಾನಿ ಅದಾನೀಸ್ ಆಸ್ಥಾನದಲ್ಲಿ ಪ್ರಧಾನಿಯೇ ನರ್ತಕಿಯಾದರೆ?! ನೆನಪಿದೆಯಾ? ಕಳೆದ ಲೋಕಸಭಾ ಚುನಾವಣೆಗೆ ಮುನ್ನಾ ಮೋದಿಯವರ ನಾಲಿಗೆ ನುಡಿದ ಒಂದು ಮಾತು- “ನಾವು ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆ, ಜೀರೋ ಮಾಡುತ್ತೇವೆ.” – ಈ ಮಾತನ್ನು ಬಿಜೆಪಿಯವರು ದೇಶದ ಉದ್ದಗಲಕ್ಕೂ ಜಪಿಸಿದರು. ಮೋಡಿ ಹಾಕಿದರು. ಮತದಾರರು ಮರುಳಾದರು. ಆಯ್ತು, ಬಿಜೆಪಿ ಅಧಿಕಾರಕ್ಕೂ ಬಂತು. ಮೋದಿಯವರು ಪ್ರಧಾನಿಯೂ ಆದರು. ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆಂದ ಮೋದಿಯ ಬಿಜೆಪಿ ಸರ್ಕಾರ ಮಾಡಿದ್ದೇನು? ಭೂ ಸ್ವಾಧೀನ ಸುಗ್ರೀವಾಜ್ಞೆ ತಂದಿತು! ರೈತರನ್ನು ಭೂಮಿಯಿಂದ ಕಿತ್ತೆಸೆದು ಅವರನ್ನು ಭೂಹೀನರನ್ನಾಗಿಸಿ ರೈತರೇ ಶೂನ್ಯವಾಗುವÀ ಕಾಯಿದೆ – ಈ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯಿದೆ! ಸ್ವಲ್ಪ ಯೋಚನೆ ಮಾಡಿ- ಭೂಮಿ ಇಟ್ಟುಕೊಂಡವನು ಆತ್ಮಹತ್ಯೆ ಮಾಡಿಕೊಂಡರೆ ತಾನೇ ಅದು ರೈತನ ಆತ್ಮಹತ್ಯೆ? ಭೂಮಿಗೆ ಅಂಟಿಕೊಂಡು ಜೀವಿಸುವ ರೈತರನ್ನು ಉಳಿಸಿ ಅವರ ಆತ್ಮಹತ್ಯೆಯನ್ನು ಶೂನ್ಯ ಮಾಡುವ ಬದಲು ಭೂಮಿಯಿಂದ ರೈತರನ್ನು ಕ್ರೂರವಾಗಿ ಕಿತ್ತೆಸೆÀದು ರೈತರನ್ನೇ ಶೂನ್ಯ ಮಾಡುವುದೇ ಈ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಮಸೂದೆಯೆಂಬ ಈ ಜೇಡರ ಬಲೆಯ ಕಾರ್ಯಕ್ರಮ. ಭಾರತದ ಭೂಮಿಯ ಜೀವಂತಿಕೆಯನ್ನು ಅರಿತವರು, ಇಂಥ ಭೂ ಸ್ವಾಧೀನ ಕಾನೂನು ಮಾಡಲಾರರು. ಭಾರತದಲ್ಲಿ ಭೂಮಿ ಅಂದರೆ ಒಂದು ವೃಕ್ಷ ಇದ್ದಂತೆ. ಆ ವೃಕ್ಷ ಆಧರಿಸಿ ಪಶು, ಪಕ್ಷಿ, ಜಾನುವಾರುಗಳು ತಮ್ಮ ಬದುಕು...