ಕಥಾ ಸಂವಿಧಾನ

ಮಕ್ಕಳಿಗಾಗಿ ಸಂವಿಧಾನ ಪುಸ್ತಕದ ಕರಿತು

                              ಲೇಖಕಿ : ವಾಣಿ ಪೆರಿಯೋಡಿ 


ಈ ಪುಸ್ತಕವು ಮಕ್ಕಳಿಗೆ ಸಂವಿಧಾನವನ್ನು ಅರ್ಥ ಮಾಡಿಸಲು ಚಿಕ್ಕ ಚಿಕ್ಕ ಕತೆಯ ರೂಪದಲ್ಲಿ ಬರೆಯಲಾಗಿದೆ. ಪುಸ್ತಕ ಓದುವಾಗ ಬರುವ ಎಲ್ಲಾ ಕಥೆಗಳು ನಾವು ಶಾಲೆಯಲ್ಲಿ ಕೇಳಿದ ಪ್ರಶ್ನೆಗಳು ನೆನಪಾಗುತ್ತವೆ. ಚಿಕ್ಕವರಿದ್ದಾಗ ಸಾಕಷ್ಟು ಪ್ರಶ್ನೆಗಳು  ಪುಟ್ಟ ತಲೆಯಲ್ಲಿ ಓಡುತಿರುತ್ತವೆ. 


ಆದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಸಿಗುವುದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಕೊಂಡಿರುತ್ತವೆ.  ಜಾತಿ ತಾರತಮ್ಯ ಮತ್ತು ಮೇಲು ಕೀಳು ಇದಕ್ಕೆ ಸಂಭಂದಿಸಿದಂತೆ ಮಕ್ಕಳ ಮನಸಿನಲ್ಲಿರು ಪ್ರಶ್ನೆಗಳಿಗೆ ಉತ್ತರಗಳು ಈ ಪುಸ್ತಕದಲ್ಲಿ ಸಿಗುತ್ತವೆ. 


ಪುಸ್ತಕದಲ್ಲಿ ಒಟ್ಟು ೨೨ ಕಥೆಗಳಿವೆ ಪ್ರತಿ ಕತೆಯು ಪ್ರಶ್ನೆಯ ರೂಪದಲ್ಲಿಯೆ ಇವೆ.  ಎಲ್ಲಾ ಕತೆಗಳು ಮಕ್ಕಳಿಗೆ ಇಷ್ಟ ಆಗುವ ಹಾಗೆ ಸರಳವಾಗಿ ಇರುವುದರಿಂದ ಮಕ್ಕಳ ಮನಸ್ಸಿಗೆ ಬೇಗ ನಾಟುತ್ತವೆ.  ನಾವು ಶಾಲೆಯಲ್ಲಿ ಇದ್ದಾಗ ಕೆಲವು ಅನುಭವಗಳು ಆಗಿರುತ್ತವೆ. ದಲಿತರ ಮಕ್ಕಳು ದೂರ ಕುಳಿತುಕೊಳ್ಳುವುದು ಇಲ್ಲವಾದರೆ ಎಲ್ಲರ ಹಿಂದೆ ಕೊನೆಯಲ್ಲಿ ಕುಳಿತು ಕೊಳ್ಳುವುದು.  ನೀರು  ಕುಡಿವಾಗ ಊಟ ಮಾಡುವಾಗ ಆದ ತಾರತಮ್ಯ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಭಾಷಣ ಇನ್ನಿತರ ಕಾರ್ಯಕ್ರಮಗಳಲ್ಲಿ ಮೇಲ್ವರ್ಗದ ಮಕ್ಕಳನ್ನು ಮಾತ್ರ ಆಯ್ದುಕೊಂಡು ಭಾಗವಹಿಸುವಂತೆ ಪ್ರೇರೇಪಿಸುವುದು. ಪ್ರತಿಭೆ ಇದ್ದರು ದಲಿತರ  ಮಕ್ಕಳು ಅವರು ಕೊಡವ ಚಾಕಲೇಟಿಗೆ ಬಾಯಿ ಬಿಟ್ಡುಕೊಂಡು ನೋಡುತ್ತ ಕುಳಿತುಕೊಂಡ ಪರಿಸ್ಥಿತಿಗಳು. ನಮ್ಮ ಸ್ನೇಹಿತರು ಮೇಲ್ಜಾತಿಯವರು ಇದ್ರೆ ಅವರ ಜೊತೆ ತಿರುಗಾಡುವಾಗ, ಮತ್ತು ಆಟವಾಡುವಾಗ ನಮ್ಮ ಹಿರಿಯರೇ ಹೇಳುತ್ತಾರೆ ಅವರ ಜೊತೆ ತಿರುಗಾಡ ಬೇಡ ಅವರೊಂದಿಗೆ ಊಟ ಮಾಡಬೇಡ ಯಾಕಂದ್ರೆ ಅವರು ಮೇಲ್ವರ್ಗದವರು  ಇದು ನಮ್ಮ ಸಂಪ್ರದಾಯ ಅಂತ ಹೇಳಿ ನಮ್ಮ ನಡುವಿನ ಬಾಂದವ್ಯವನ್ನು ಕಡಿಮೆಗೊಳಿಸುವುದು ಒಂದು ಕಡೆಯಾದರೆ ಇನ್ನು, ಮೇಲ್ಜಾತಿಯವರು ಮಾಡುವ  ತಾರತಮ್ಯಗಳು , ಇವೆಲ್ಲವನ್ನು ಮಕ್ಕಳಿಗೆ ಅರ್ಥ ಮಾಡಿಸುವುದು. ತುರ್ತಾಗಿ ನಡೆಯ ಬೇಕಿರುವ ಕೆಲಸವಾಗಿದೆ. ಇಂತ ಹೊಸ ತರಹದ ಪ್ರಯೋಗ ಮಾಡಿದ ವಾಣಿ ಪರೆಯೋಡಿಯವರಿಗೆ ಅಭಿನಂದನೆಗಳು…

- ಮಾಳಿಂಗರಾಯ ಕೆಂಭಾವಿ 

Comments

Popular posts from this blog

ಹುಟ್ಟು ಮತ್ತು ಸಾವುಗಳ ನಡುವೆ...