Posts

Showing posts from August, 2021

ನೀಲು ನನ್ನ ಸಾಹಿತ್ಯದ ಬಹುಪಾಲು...

Image
  ನೀಲು ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. ನೀಲು ಎಂಬ ಈ ಕಿರು  ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ‌.                         ದಿನಕ್ಕೆ ಒಂದಾದರು ನೀಲು ಕವಿತೆ ಓದಿದಾಗ ಮಾತ್ರ ನನಗೆ ಸಮಾಧಾನ ಸಿಗೋದು....ಎನ್ನುವಷ್ಟರ ಮಟ್ಟಿಗೆ ನನ್ನೊಂದಿಗೆ ನೀಲು ಆವರಿಸಿದ್ದಾಳೆ...   ಈ ಕವಿತೆಯನ್ನು ನಾನಷ್ಟೆ ಇಷ್ಟ ಪಡುತ್ತೇನಾ?  ಇಲ್ಲ. ಓದಿದ ಪ್ರತಿಯೊಬ್ಬರು ನೀಲುವನ್ನು ಮೆಚ್ಚಿದ್ದಾರೆ ಹಾಗೆಯೇ ಮೆಚ್ಚುತ್ತಾರೆ ಎನ್ನುವ ಭರವಸೆಯೂ ಇದೆ.  ಲಂಕೇಶರು ಪತ್ರಿಕೆ ನಡೆಸುತಿದ್ದಾಗ ದಿನಕ್ಕೊಂದು ನೀಲು ಕವಿತೆ ಅಚ್ಚು ಮಾಡುತಿದ್ದರು. ಎಷ್ಟೋ  ಜನ ಈ ಕವಿತೆಗಾಗಿಯೇ ಪತ್ರಿಕೆ ಓದಿದ ಉದಾಹರಣೆಗಳು ಇವೆ. ಹೊಸದೊಂದು ಓದುಗ ವರ್ಗವನ್ನೇ ಸೃಷ್ಟಿಸಿದ ಕೀರ್ತೀ ಲಂಕೇಶರ ನೀಲುವಿಗೆ ಸಲ್ಲುತ್ತದೆ. ಬರಿ  ಓದುಗ ವರ್ಗವನ್ನಷ್ಟೇ ಅಲ್ಲ ಎಷ್ಟೋ ಯುವ ಕವಿ / ಕವಯಿತ್ರಿಯರನ್ನೂ ಸೃಷ್ಟಿಸಿದೆ.   *ಏನಿದೆ ಈ ನೀಲುವಿನಲ್ಲಿ :*  ನನಗೆ ನಾನೆ ಈ ಪ್ರಶ್ನೆಯನ್ನ ಹಾಕಿಕೊಂಡರು ಬೇರೆಯವರು ಈ ಪ್ರಶ್ನೆ ಹಾಕಿದರು ನನ್ನ ಉತ್ತರ....ಏನಿಲ್ಲ ಎನ್ನುವ ಮರು ಪ್ರಶ್ನೆಯೇ...!!  ನೀಲು ಬಹಳ ಸರಳವಾಗಿ ಮೂಡಿಬಂದ ಸಾಲುಗಳು...ಇದರಲ್ಲಿ ಒಳಾರ್ಥ ಗಳು ಬಹಳಷ್ಟು ಬಳಸಿದ್ದಾರೆ‌...ಹುಟ್ಟಿನಿಂದ ಸಾವಿನ ವರೆಗೆ ಮನುಷ್ಯನ ಅನುಭವಕ್ಕೆ ಬರುವ ಎಲ್ಲವನ್ನೂ  ಹೇಳುವ ಪ್ರಯತ್ನ ನೀಲುವಿನಲ್ಲಾಗಿದೆ.  ನೋ