Posts

Showing posts with the label ಯಕ್ಷ ದೀವಿಗೆ

ದೇಶವೆಂದರೆ

ದೇಶವೆಂದರೆ ಗಡಿಯಲ್ಲ  ಮಣ್ಣಲ್ಲ ಧರ್ಮವಲ್ಲ ದೇವರಲ್ಲ ತಿರಂಗ ದ್ವಜವಲ್ಲ…. ದೇಶವೆಂದರೆ… ಬಿಸಿಲು, ಗಾಳಿ, ಮಳೆಯನ್ನದೇ  ಅನ್ನ ಬೆಳೆವ  ಇಟ್ಟಿಗೆ ವೊತ್ತು ಕಟ್ಟಡ ಕಟ್ಟುವ  ಬೀದಿಯಲಿ ಕಸಗೂಡಿಸಿ  ಶುಚಿ ಕಾಪಾಡುವ  ಆಧುನಿಕತೆಯಲ್ಲೂ  ಮಲಬಾಚುವ  ಜೀವದಂಗು ತೊರೆದು  ನಮ್ಮನ್ನು ರಕ್ಷಿಸುವ… ಶ್ರಮಜೀವಿಗಳು    ಈ ದೇಶ… ದೇಶವೆಂದರೆ  ಸಂವಿಧಾನ….. ದೇಶವೆಂದರೆ ನಾನು…. ದೇಶವೆಂದರೆ ನೀನು…. ದೇಶವೆಂದರೆ ನಾವೆಲ್ಲರೂ…. - ಎಂ.ಕೆ.ಕೆಂಭಾವಿ

ಮೌನ...

Image
ಮೌನ ... ಮೌನ ಎಲ್ಲವನ್ನು ನುಂಗಿ ನೀರು ಕುಡಿದು ಬೋಳಾಯಿಸಿತು... ಚೈತನ್ಯವನ್ನು ಚೇತರಿಸಿಕೊಳ್ಳದ ಮೌನ ಜಡತ್ವ ಹಿಡಿಸಿತು... ಮೌನ... ಗತಕಾಲದ ಭವ್ಯತೆಯನ್ನು ಪಾಳುಬಿದ್ದ ಗುಡಿಯ ಮಾಡಿತು... ಮೌನ... ಶಾಂತಿ ಸೌಹಾರ್ದತೆ ಹಾಳು ಮಾಡಿ ಕೋಮುವಾದದ ಕಿಡಿ ಹಚ್ಚಿತು... ಮೌನ... ಪ್ರೀತಿ ಪ್ರೇಮವ ನಾಶ ಮಾಡಿ ಹೂಂಕರಿಸಿ ನಗುತ್ತಿತ್ತು...  *ಮಾಳಿಂಗರಾಯ.ಕೆಂಭಾವಿ*

ಹುಚ್ಚಿ ಮತ್ತು ಕವಿ...

ಪ್ರೇಮವೆಂಬ ಮಾಯೆಯಲ್ಲಿ ಮುಳುಗಿದಾಗ ಹುಚ್ಚಕೂಡಾ ಕವಿಯಾಗುತ್ತಾನೆ... ಹಾಗೆಯೇ ಕೆಲವೊಮ್ಮೆ  ಕವಿಯೂ ಸಹ ಹುಚ್ಚನಾಗುವ ಸಂಭವ ಬಂದರೂ ಬರಬಹುದು...

ನಾನು... ಲಂಕೇಶ್

ಪ್ರೇಮವೆಂಬ ಜ್ಯೋತಿ ನಂದಿ ಹೋದಾಗ ಅರಮನೆಯಲ್ಲಿದ್ದರೂ ಸೆರಮನೆಯಲ್ಲಿದ್ದಂತೆಯೇ ಭಾಸವಾಗುತ್ತದೆ.