ದೇಶವೆಂದರೆ



ದೇಶವೆಂದರೆ ಗಡಿಯಲ್ಲ  ಮಣ್ಣಲ್ಲ

ಧರ್ಮವಲ್ಲ ದೇವರಲ್ಲ

ತಿರಂಗ ದ್ವಜವಲ್ಲ….


ದೇಶವೆಂದರೆ…

ಬಿಸಿಲು, ಗಾಳಿ, ಮಳೆಯನ್ನದೇ 

ಅನ್ನ ಬೆಳೆವ 

ಇಟ್ಟಿಗೆ ವೊತ್ತು ಕಟ್ಟಡ ಕಟ್ಟುವ 

ಬೀದಿಯಲಿ ಕಸಗೂಡಿಸಿ 

ಶುಚಿ ಕಾಪಾಡುವ 

ಆಧುನಿಕತೆಯಲ್ಲೂ 

ಮಲಬಾಚುವ 

ಜೀವದಂಗು ತೊರೆದು 

ನಮ್ಮನ್ನು ರಕ್ಷಿಸುವ…

ಶ್ರಮಜೀವಿಗಳು   

ಈ ದೇಶ…


ದೇಶವೆಂದರೆ 

ಸಂವಿಧಾನ…..

ದೇಶವೆಂದರೆ ನಾನು….

ದೇಶವೆಂದರೆ ನೀನು….

ದೇಶವೆಂದರೆ ನಾವೆಲ್ಲರೂ….


- ಎಂ.ಕೆ.ಕೆಂಭಾವಿ

Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...