Posts

Showing posts from November, 2023

ಕವಿತೆ ಕೇಳಿ

https://open.spotify.com/episode/6QN8vt4Ae4KNwV45ElkJhm?si=ddViASqTQDeVJxb-b-oqmA ವೀಡಿಯೋ 

ಕಥಾ ಸಂವಿಧಾನ

Image
ಮಕ್ಕಳಿಗಾಗಿ ಸಂವಿಧಾನ ಪುಸ್ತಕದ ಕರಿತು                                ಲೇಖಕಿ : ವಾಣಿ ಪೆರಿಯೋಡಿ  ಈ ಪುಸ್ತಕವು ಮಕ್ಕಳಿಗೆ ಸಂವಿಧಾನವನ್ನು ಅರ್ಥ ಮಾಡಿಸಲು ಚಿಕ್ಕ ಚಿಕ್ಕ ಕತೆಯ ರೂಪದಲ್ಲಿ ಬರೆಯಲಾಗಿದೆ. ಪುಸ್ತಕ ಓದುವಾಗ ಬರುವ ಎಲ್ಲಾ ಕಥೆಗಳು ನಾವು ಶಾಲೆಯಲ್ಲಿ ಕೇಳಿದ ಪ್ರಶ್ನೆಗಳು ನೆನಪಾಗುತ್ತವೆ. ಚಿಕ್ಕವರಿದ್ದಾಗ ಸಾಕಷ್ಟು ಪ್ರಶ್ನೆಗಳು  ಪುಟ್ಟ ತಲೆಯಲ್ಲಿ ಓಡುತಿರುತ್ತವೆ.  ಆದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಸಿಗುವುದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಕೊಂಡಿರುತ್ತವೆ.  ಜಾತಿ ತಾರತಮ್ಯ ಮತ್ತು ಮೇಲು ಕೀಳು ಇದಕ್ಕೆ ಸಂಭಂದಿಸಿದಂತೆ ಮಕ್ಕಳ ಮನಸಿನಲ್ಲಿರು ಪ್ರಶ್ನೆಗಳಿಗೆ ಉತ್ತರಗಳು ಈ ಪುಸ್ತಕದಲ್ಲಿ ಸಿಗುತ್ತವೆ.  ಪುಸ್ತಕದಲ್ಲಿ ಒಟ್ಟು ೨೨ ಕಥೆಗಳಿವೆ ಪ್ರತಿ ಕತೆಯು ಪ್ರಶ್ನೆಯ ರೂಪದಲ್ಲಿಯೆ ಇವೆ.  ಎಲ್ಲಾ ಕತೆಗಳು ಮಕ್ಕಳಿಗೆ ಇಷ್ಟ ಆಗುವ ಹಾಗೆ ಸರಳವಾಗಿ ಇರುವುದರಿಂದ ಮಕ್ಕಳ ಮನಸ್ಸಿಗೆ ಬೇಗ ನಾಟುತ್ತವೆ.  ನಾವು ಶಾಲೆಯಲ್ಲಿ ಇದ್ದಾಗ ಕೆಲವು ಅನುಭವಗಳು ಆಗಿರುತ್ತವೆ. ದಲಿತರ ಮಕ್ಕಳು ದೂರ ಕುಳಿತುಕೊಳ್ಳುವುದು ಇಲ್ಲವಾದರೆ ಎಲ್ಲರ ಹಿಂದೆ ಕೊನೆಯಲ್ಲಿ ಕುಳಿತು ಕೊಳ್ಳುವುದು.  ನೀರು  ಕುಡಿವಾಗ ಊಟ ಮಾಡುವಾಗ ಆದ ತಾರತಮ್ಯ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಭಾಷಣ ಇನ್ನಿತರ ಕಾರ್ಯಕ್ರಮಗಳಲ್ಲಿ ಮೇಲ್ವರ್ಗದ ಮಕ್ಕಳನ್ನು ಮಾತ್ರ ಆಯ್ದುಕೊಂಡು ಭಾಗವಹಿಸುವಂತೆ ಪ್ರೇರೇಪಿಸುವುದು. ಪ್ರತಿಭೆ ಇದ್ದರು ದಲಿತರ  ಮಕ್ಕಳ

ಸುರ್ಪನಕಿ ರಾಕ್ಷಸಿಯೇ?

Image

ದೇಶವೆಂದರೆ

ದೇಶವೆಂದರೆ ಗಡಿಯಲ್ಲ  ಮಣ್ಣಲ್ಲ ಧರ್ಮವಲ್ಲ ದೇವರಲ್ಲ ತಿರಂಗ ದ್ವಜವಲ್ಲ…. ದೇಶವೆಂದರೆ… ಬಿಸಿಲು, ಗಾಳಿ, ಮಳೆಯನ್ನದೇ  ಅನ್ನ ಬೆಳೆವ  ಇಟ್ಟಿಗೆ ವೊತ್ತು ಕಟ್ಟಡ ಕಟ್ಟುವ  ಬೀದಿಯಲಿ ಕಸಗೂಡಿಸಿ  ಶುಚಿ ಕಾಪಾಡುವ  ಆಧುನಿಕತೆಯಲ್ಲೂ  ಮಲಬಾಚುವ  ಜೀವದಂಗು ತೊರೆದು  ನಮ್ಮನ್ನು ರಕ್ಷಿಸುವ… ಶ್ರಮಜೀವಿಗಳು    ಈ ದೇಶ… ದೇಶವೆಂದರೆ  ಸಂವಿಧಾನ….. ದೇಶವೆಂದರೆ ನಾನು…. ದೇಶವೆಂದರೆ ನೀನು…. ದೇಶವೆಂದರೆ ನಾವೆಲ್ಲರೂ…. - ಎಂ.ಕೆ.ಕೆಂಭಾವಿ

ಹುಟ್ಟು ಮತ್ತು ಸಾವುಗಳ ನಡುವೆ...

Image
" ಹುಟ್ಟು-ಸಾವುಗಳ ನಡುವಿನ ವೇಳೆಯನ್ನು ಬದುಕು ಎಂದು ಕರೆಯುತ್ತೇವೆ.  ಈ ಬದುಕು ಕಾಲಕ್ಕೆ ಸಂಬಂಧಿಸಿದ್ದು. ಕಾಲ ಕೇವಲ ಗಡಿಯಾರವನ್ನವಲಂಬಿಸಿಲ್ಲ; ನಾಡಿ ಬಡಿತವನ್ನು, ಬದುಕುವ ಆಶೆ ಮತ್ತು ಸಾವಿನ ಸಾಧ್ಯತೆಯನ್ನು ಅವಲಂಬಿಸಿದ್ದು... ಪಿ.ಲಂಕೇಶ್ ಕಾಲದ ಪ್ರಜ್ಞೆ ನೈತಿಕ ಮತ್ತು ಸಾಮಾಜಿಕವಾದದ್ದು. ನಾನು ತುಂಬ ಚಿಕ್ಕವನಾಗಿದ್ದಾಗ ಕಂಡುಕೊಂಡ ಸತ್ಯ ಇದು‌... ಕಾಲದ ಪರಿವೆ ಕೇವಲ ಸಾಮಾಜಿಕವಲ್ಲ, ಅದು ಒಬ್ಬ ವ್ಯಕ್ತಿ ಮತ್ತು ಗುಂಪು ತನ್ನಲ್ಲಿ ಇರುವ ಭೂತಕಾಲದ ನೆನಪುಗಳನ್ನು, ಮೌಲ್ಯಗಳನ್ನು ವರ್ತಮಾನಕ್ಕೆ ಹೊಂದಿಸಿ ಭವಿಷ್ಯ ಕಾಲದತ್ತ ಅಡಿ ಇಡುವ ರೀತಿ ಕೂಡ. ಭಾರತೀಯ ಈ ದೃಷ್ಟಿಯಲ್ಲಿ ಕೊಂಚ ದುರ್ಬಲ... ಕಾಲದ ಆಟ ವ್ಯಕ್ತಿಯಿಂದಲೇ ಶುರುವಾಗುತ್ತದೆ. ಆತ ತನಗೆ, ತನ್ನವರಿಗೆ ಎಂದು ರೂಪಿಸಿಕೊಳ್ಳುವ ಆಶಯಗಳೆಲ್ಲ ಆತನ ಒಳ ಮಾರ್ದವಗಳನ್ನು, ಆತನ ವ್ಯಕ್ತಿತ್ವದ ಸಾಧ್ಯತೆಗಳನ್ನು ಅವಲಂಬಿಸಿದೆ. ನಾನು ನಾಳೆಯ ಹೊತ್ತಿಗೆ, ಇಷ್ಟು ಗಂಟೆಗೆ ಮಾಡಬೇಕಾದ್ದನ್ನು ಮಾಡದಿದ್ದರೆ ಅದು ಆತ್ಮವಂಚನೆ. ತನ್ನ ವೇಳೆಗೆ ತಾನು ಮಾಡಿಕೊಂಡ ಮೋಸ. ಈ ವಂಚನೆಯಿಂದಲೇ ಸಾಮೂಹಿಕ ವೇಳೆಯ ಬಗ್ಗೆ ನಿರ್ಲಕ್ಷ್ಯ‌ ಶುರುವಾಗುತ್ತದೆ. ವರ್ತಮಾನದ ಕ್ರಿಯೆ ಮಂದವಾಗುತ್ತ ಹೋಗುತ್ತದೆ. ಕಾಲ, ದೇಶಕ್ಕೆ ವ್ಯಕ್ತಿಯ ಹೊಣೆ ತನ್ನ ಮೊನಚು ಕಳೆದುಕೊಳ್ಳುತ್ತದೆ. ಈ ಜಗತ್ತಿನಲ್ಲಿ ಏನಾದರೂ ಒಳ್ಳೆಯದು, ಮೌಲ್ಯ ಅನ್ನಿಸಿಕೊಳ್ಳುವಂಥದು ಉಳಿದಿದ್ದರೆ ಅದು ಸಮಯಕ್ಕೆ ಬದ್ಧವಾಗಿಯೇ ಉಳಿದಿದೆ; ಸೃಷ್ಟಿ

ಮಹಿಳಾ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯವಿರಲಿ

ಅನಾದಿ ಕಾಲದಿಂದಲೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನೊಡಲಾಗುತ್ತಿದೆ. ಪುರುಷಾಧಿಪತ್ಯದಿಂದ ಕೂಡಿರುವ ನಮ್ಮ ದೇಶದಲ್ಲಿ ಮಹಿಳೆಯರನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದೆ ತಳ್ಳಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷವಾದರೂ ಮಹಿಳಾ ಸ್ವಾತಂತ್ರ ಗೌಣವಾಗಿದೆ. ಮಹಿಳೆಯರು ರಾಜಕೀಯ ಮತ್ತು ಸಾಮಾಜಿಕವಾಗಿ ಮುಂದುವರೆದಾಗ ಮಾತ್ರ ದೇಶದಲ್ಲಿ ಲಿಂಗ ಸಾಮಾನತೆ ಕಾಣಲು ಸಾಧ್ಯವಾಗುತ್ತದೆ. ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಪಾಲು ಮಹಿಳೆಯರದು, ಹಾಗಿದ್ದ ಮೇಲೆ ರಾಜಕೀಯದಲ್ಲಿ ಅರ್ಧದಷ್ಟು ಪಾಲು ಮಹಿಳೆಯರಿಗೆ ಮೀಸಲಾಆಗಿರಬೇಕಿತ್ತು, ಆದರೆ ಇಂದಿನ ರಾಜಕೀಯವನ್ನು ಗಮನಿಸಿದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಹಿಳೆಯರು ಕಾಣಿಸಿಕೊಳ್ಳುವುದು ಬೇಸರದ ಸಂಗತಿ. ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆಗೊಳಿಸಿದ್ದು, ಆ ಮೂಸೂದೆ ಜಾರಿಯಾದ ಸಮಯ ಮತ್ತು ಅದರಲ್ಲಿನ ಕೆಲವು ನಿರ್ಭಂಧಗಳನ್ನು ನೋಡಿದರೆ ಇದು ಮುಂಬರುವ ಲೋಕಸಭೆ ಚುನಾವಣೆಯ ಅಸ್ತ್ರವೆಂದು ಭಾಸವಾಗುತ್ತದೆ. ಅಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧೀಯವರು ಸಂವಿಧಾನಕ್ಕೆ 72 ಮತ್ತು 73 ನೇ ತಿದ್ದುಪಡಿ ತಂದು ಮಹಿಳಾ ಮೀಸಲಾತಿ ಜಾರಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನದಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ದೊರೆಯಿತು. ಇದೇ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ