ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು ಇಷ್ಟಪಟ್ಟರೂ ಸೇವಿಸುವ ಆಹಾರ ಪದ್ಧತಿಯಾಗಿದೆ. ಆಹಾರ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ಮಾಂಸಹಾರವೇ ನಮ್ಮ ದೇಶದ ಮೂಲ ಆಹಾರ ಎಂದು ಗೊತ್ತಾಗುತ್ತದೆ. ಇತ್ತೀಚಿನ ಕೆಲವು ಆಹಾರ ಸಂಸ್ಕೃತಿಯು ಪಲ್ಲಟವಾಗುತ್ತಿರುವ ಆಹಾರ ರಾಜಕೀಯವಾಗುತ್ತಿರುವುದು ದುರಂತ. ಇಷ್ಟೆಲ್ಲಾ ಆಹಾರದ ಬಗ್ಗೆ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ... ಅನ್ನಪೂರ್ಣಿಯ ಬಗ್ಗೆ ಹೇಳಲು... ಅನ್ನಪೂರ್ಣಿ ನಯನತಾರ ಅಭಿನಯದ ಚಿತ್ರ ಒಟಿಟಿಯಲ್ಲಿ ಸದ್ದು, ಚರ್ಚೆಯಾಗುತ್ತಿರುವ ಸಿನಿಮಾ ನಾಯಕಿಯರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ತನಗೆ ಇಷ್ಟವಾದ ಕನಸನ್ನು ಕಲೆ ಹಾಕಿಕೊಂಡು ಭಾರತಕ್ಕೆ ಮಾಸ್ಟರ್ ಸೆಫ್ ಆಗಬೇಕು ಎಂದು ನೋಡುವ ಸಿನಿಮಾ...
" ಹುಟ್ಟು-ಸಾವುಗಳ ನಡುವಿನ ವೇಳೆಯನ್ನು ಬದುಕು ಎಂದು ಕರೆಯುತ್ತೇವೆ. ಈ ಬದುಕು ಕಾಲಕ್ಕೆ ಸಂಬಂಧಿಸಿದ್ದು. ಕಾಲ ಕೇವಲ ಗಡಿಯಾರವನ್ನವಲಂಬಿಸಿಲ್ಲ; ನಾಡಿ ಬಡಿತವನ್ನು, ಬದುಕುವ ಆಶೆ ಮತ್ತು ಸಾವಿನ ಸಾಧ್ಯತೆಯನ್ನು ಅವಲಂಬಿಸಿದ್ದು... ಪಿ.ಲಂಕೇಶ್ ಕಾಲದ ಪ್ರಜ್ಞೆ ನೈತಿಕ ಮತ್ತು ಸಾಮಾಜಿಕವಾದದ್ದು. ನಾನು ತುಂಬ ಚಿಕ್ಕವನಾಗಿದ್ದಾಗ ಕಂಡುಕೊಂಡ ಸತ್ಯ ಇದು... ಕಾಲದ ಪರಿವೆ ಕೇವಲ ಸಾಮಾಜಿಕವಲ್ಲ, ಅದು ಒಬ್ಬ ವ್ಯಕ್ತಿ ಮತ್ತು ಗುಂಪು ತನ್ನಲ್ಲಿ ಇರುವ ಭೂತಕಾಲದ ನೆನಪುಗಳನ್ನು, ಮೌಲ್ಯಗಳನ್ನು ವರ್ತಮಾನಕ್ಕೆ ಹೊಂದಿಸಿ ಭವಿಷ್ಯ ಕಾಲದತ್ತ ಅಡಿ ಇಡುವ ರೀತಿ ಕೂಡ. ಭಾರತೀಯ ಈ ದೃಷ್ಟಿಯಲ್ಲಿ ಕೊಂಚ ದುರ್ಬಲ... ಕಾಲದ ಆಟ ವ್ಯಕ್ತಿಯಿಂದಲೇ ಶುರುವಾಗುತ್ತದೆ. ಆತ ತನಗೆ, ತನ್ನವರಿಗೆ ಎಂದು ರೂಪಿಸಿಕೊಳ್ಳುವ ಆಶಯಗಳೆಲ್ಲ ಆತನ ಒಳ ಮಾರ್ದವಗಳನ್ನು, ಆತನ ವ್ಯಕ್ತಿತ್ವದ ಸಾಧ್ಯತೆಗಳನ್ನು ಅವಲಂಬಿಸಿದೆ. ನಾನು ನಾಳೆಯ ಹೊತ್ತಿಗೆ, ಇಷ್ಟು ಗಂಟೆಗೆ ಮಾಡಬೇಕಾದ್ದನ್ನು ಮಾಡದಿದ್ದರೆ ಅದು ಆತ್ಮವಂಚನೆ. ತನ್ನ ವೇಳೆಗೆ ತಾನು ಮಾಡಿಕೊಂಡ ಮೋಸ. ಈ ವಂಚನೆಯಿಂದಲೇ ಸಾಮೂಹಿಕ ವೇಳೆಯ ಬಗ್ಗೆ ನಿರ್ಲಕ್ಷ್ಯ ಶುರುವಾಗುತ್ತದೆ. ವರ್ತಮಾನದ ಕ್ರಿಯೆ ಮಂದವಾಗುತ್ತ ಹೋಗುತ್ತದೆ. ಕಾಲ, ದೇಶಕ್ಕೆ ವ್ಯಕ್ತಿಯ ಹೊಣೆ ತನ್ನ ಮೊನಚು ಕಳೆದುಕೊಳ್ಳುತ್ತದೆ. ಈ ಜಗತ್ತಿನಲ್ಲಿ ಏನಾದರೂ ಒಳ್ಳೆಯದು, ಮೌಲ್ಯ ಅನ್ನಿಸಿಕೊಳ್ಳುವಂಥದು ಉಳಿದಿದ್ದರೆ ಅದು ಸಮಯಕ್ಕೆ ಬದ್ಧವಾಗಿಯೇ ಉಳಿದಿದೆ; ಸೃಷ್ಟಿ...
Comments
Post a Comment