ಬಿರಿಯಾನಿಗೆ ಜಾತಿ, ಮತ ಎಲ್ಲಿದೆ?

ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು ಇಷ್ಟಪಟ್ಟರೂ ಸೇವಿಸುವ ಆಹಾರ ಪದ್ಧತಿಯಾಗಿದೆ. ಆಹಾರ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ಮಾಂಸಹಾರವೇ ನಮ್ಮ ದೇಶದ ಮೂಲ ಆಹಾರ ಎಂದು ಗೊತ್ತಾಗುತ್ತದೆ. ಇತ್ತೀಚಿನ ಕೆಲವು ಆಹಾರ ಸಂಸ್ಕೃತಿಯು ಪಲ್ಲಟವಾಗುತ್ತಿರುವ ಆಹಾರ ರಾಜಕೀಯವಾಗುತ್ತಿರುವುದು ದುರಂತ.

ಇಷ್ಟೆಲ್ಲಾ ಆಹಾರದ ಬಗ್ಗೆ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ... ಅನ್ನಪೂರ್ಣಿಯ ಬಗ್ಗೆ ಹೇಳಲು... ಅನ್ನಪೂರ್ಣಿ ನಯನತಾರ ಅಭಿನಯದ ಚಿತ್ರ ಒಟಿಟಿಯಲ್ಲಿ ಸದ್ದು, ಚರ್ಚೆಯಾಗುತ್ತಿರುವ ಸಿನಿಮಾ ನಾಯಕಿಯರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ತನಗೆ ಇಷ್ಟವಾದ ಕನಸನ್ನು ಕಲೆ ಹಾಕಿಕೊಂಡು ಭಾರತಕ್ಕೆ ಮಾಸ್ಟರ್ ಸೆಫ್ ಆಗಬೇಕು ಎಂದು ನೋಡುವ ಸಿನಿಮಾ... 


ಪ್ರತೀ ಮನೆಯಲ್ಲೂ ಅಡುಗೆ ಕಾಯಕ ಮಾಡುವವರು ಮಹಿಳೆಯರೇ... ಆದರೆ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಅಡುಗೆ ಮಾಡುವವರು ಮಾತ್ರ ಗಂಡಸರೇ...

ಈ ಚಿತ್ರದಲ್ಲಿ ಅಡುಗೆ ಮಾತ್ರ ಇಲ್ಲ. ಮಹಿಳೆಯೊಬ್ಬಳು ಕನಸು ಏನೆಲ್ಲ ಸ್ಟ್ರಗಲ್ ಕಂಡರೆ. ಎನ್ನುವುದನ್ನು ಕಾಣಬಹುದು. ಪ್ರತಿ ಹೆಣ್ಣು ಮಗಳು ವಯಸ್ಸಿಗೆ ಬಂದರೆ ಸಾಕು.. ನೀನು ಏನು ಓದಿದ್ದೀಯಾ? ಏನು ಕೆಲಸ

ಮಾಡ್ತೀಯಾ ? ಎಂದು ಕೇಳುವ ಬದಲು ನಿನಗೆ ಅಡುಗೆ ಮಾಡಲು ಬರುತ್ತಾ ಎಂದು ಕೇಳುವವರೇ ಹೆಚ್ಚು. ಮನೆಯವರಾದರೂ ನೀನು ಅಡುಗೆ ಕಲಿ ಎಂದು ಹೇಳುತ್ತಾರೆ. ಆವಾಗಲೇ ತೀರ್ಮಾನಿಸುತ್ತಾರೆ. ನೀನು ನಾಲ್ಕು ಗೋಡೆಗೆ ಮಾತ್ರ ಸೀಮಿತವೆಂದು,, ಇದೊಂದು ಜೆಂಡರ್ ಸಮಸ್ಯೆಯಾದರೆ !! ಇನ್ನು ಜಾತಿಯ ಸಮಸ್ಯೆ ಬೇರೆ ತರಹದ್ದು, 


ಈ ಸಿನಿಮಾದ ಅನ್ನಪೂರ್ಣಿ ಬ್ರಾಹ್ಮಣ ಕುಟುಂಬದವಳು ಅವಳ ತಂದೆ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಕೆಲಸ ಮಾಡುತ್ತಾನೆ. ತಂದೆ ಮಾಡುವ ಪ್ರಸಾದ ಅದು ಖಂಡಿತ ನೋಡಿ ಅನ್ನಪೂರ್ಣಿ ಅಡುಗೆಯಲ್ಲಿ ಆಸಕ್ತಿ ಬರುತ್ತೆ... 

     ಅವಳು ಸೆಫ್ ಆಗುವ ಕನಸಿಗೆ ಮೊದಲು ತೊಡಟಾಗುವುದು ಅವರ ತಂದೆ. ಬ್ರಾಹ್ಮಣರಾದ ಶೆಫ್ ಆದರೆ ಮಾಂಸಹಾರದ ಅಡುಗೆಯನ್ನು. ಇದರಿಂದ ಬ್ರಾಹ್ಮಣರ ಕಲ್ಮಠತನ ಹಾಳಾಗುತ್ತದೆ. ಎಂದೂ... ಅನ್ನಪೂರ್ಣಿಯ ಕನಸನ್ನು ವಿರೋಧಿಸಿ ಮದುವೆಗೆ ಮುಂದಾಗುತ್ತಾರೆ. ಮಹಿಳೆ ಸ್ವತಂತ್ರವಾಗಿ ಯೋಚಿಸಿ ಬದುಕಬೇಕು ಎಂದುಕೊಂಡ ತಕ್ಷಣ ಅವರ ಕನಸುಗಳನ್ನು ಹಾಳುಗೆಡವಲು ಈ ಸಮಾಜ ಪ್ರಯೋಗಿಸುವ ಮೊದಲ ಅಸ್ತ್ರವೇ ಮದುವೆ,, 

       ಬ್ರಾಹ್ಮಣ್ಯ ಮಹಿಳೆಯರಿಗೆ ಯಾವಾಗಲೂ ತೊಡಕಾಗೇ ಇರತ್ತದೆ. ತಂದೆ ಮಗಳ ಕನಸಿಗಿಂತ ಬ್ರಾಹ್ಮಣ್ಯವೇ ಮುಖ್ಯ ಎಂದು ಕೊಂಡಾಗ… ಪ್ರತಿ ಮಹಿಳೆಯೂ ಅನ್ನಪೂರ್ಣಿಯಾಗಿದ್ದರು.

ಮನೆಯವರನ್ನು ವಿರೋಧಿಸಿ ಮುಂದಿನ ಹೆಜ್ಜೆ ಇಡುವಾಗ ಪುರುಷ ಪ್ರಾಧಾನ್ಯತೆಯ ಭಾರತದ ಮಹಿಳೆಯೊಬ್ಬಳು ತನ್ನ ಗುರಿಯೆಡೆಗೆ ಸಾಗುವುದು ಸುಲಭದ ಮಾತಲ್ಲ. ಈ ಸಿನಿಮಾದಲ್ಲಿ ಸಹೋದ್ಯೋಗಿಗಳ ವಿರೋಧ, ಸೋಲಿಸುವ ಪ್ರಯತ್ನ ಎಲ್ಲವೂ ನಡೆಯುತ್ತವೆ.


ಸಸ್ಯಾಹಾರಿಯಾದ ಅನ್ನಪೂರ್ಣಿಗೆ ಸೆಫ್ ಕಾಂಪಿಟೇಶನ್ ನಲ್ಲಿ ಕೊನೆಯ ರೌಂಡ್ ನಲ್ಲಿ ಬಿರಿಯಾನಿಯೇ ಪ್ರಾರಂಭ. ಆ ಬಿರಿಯಾನಿ ಮಾಡುವುದನ್ನು ಅವಳು ಫರಾನ್ ಎಂಬ ಬಾಲ್ಯದ ಸ್ನೇಹಿತನ ತಾಯಿಯಿಂದ ಫರಾನ್ ತಾಯಿ ಬಿರಿಯಾನಿ ಮಾಡುವಾಗ ನಂಬಿಕೆಯಿಂದ ನಮಾಝ್ ಮಾಡಿ. ಅದನ್ನೇ ಅನುಸರಿದ ಅನ್ನಪೂರ್ಣಿಯ ಬಿರಿಯಾನಿ ಗೆಲ್ಲುತ್ತೆ...

ಕೊನೆಗೆ ಬಿರಿಯಾನಿಗೆ ಜಾತಿ,ಮತ ಎಲ್ಲಿದೆ ? ಎನ್ನುವ ಮಾತು ಸೌಹಾರ್ದ ಮತ್ತು ವಿವಿಧ ಆಹಾರ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ. 

ಸಿನಿಮಾ ಪೂರ್ತಿ ಎಲ್ಲಿಯೂ ಬೋರ್ ಹೊಡಿಸದೇ ಎಲ್ಲಾ ಸನ್ನಿವೇಶಗಳನ್ನು ಕುತೂಹಲದಿಂದ ನೋಡುವಂತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಈ ಸಿನಿಮಾ ಹೊಂದಿದೆ.


  • ಮಾಳಿಂಗರಾಯ, ಕೆಂಭಾವಿ

     ಯುವ ಪತ್ರಕರ್ತ

Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...