ಸುರ್ಪನಕಿ ರಾಕ್ಷಸಿಯೇ?


ಮಧ್ಯಪ್ರದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು ಕೆಲವು ದಿನಗಳ ಹಿಂದೆ, ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ, ಹೀಗೆ ಹೇಳಿದ್ದರು. "ಕೆಟ್ಟದಾಗಿ ಬಟ್ಟೆ ಧರಿಸುವ ಹುಡುಗಿಯರು ರಾಮಾಯಣದಲ್ಲಿ ಬರುವ ಸುರ್ಪನಖಿ ರಾಕ್ಷಸಿಯ ಹಾಗೇ ಕಾಣುತ್ತಾರೆ" ಎಂದು.

ಆ ವಿಷಯವನ್ನು ಈಗ ಯಾಕೆ ಹೇಳುತ್ತಿರುವುದು ಎಂದು ನೀವು ಯೋಚಿಸುತ್ತಿರಬಹುದು. ಆದರೆ ಯೋಚಿಸಬೇಕಾದ ಸ್ಥಿತಿ ಎದುರಾಗಿದೆ…

ಹೌದು.. ಬಟ್ಟೆಗಳಲ್ಲಿ ಕೆಟ್ಟ ಬಟ್ಟೆ ಒಳ್ಳೆ ಬಟ್ಟೆಗಳಿವೆಯೇ..?

ಮೈತುಂಬಾ ಬಟ್ಟೆ ಹಾಕಿಕೊಳ್ಳುವವರು ದೇವತೆ ತರ ಕಾಣಿಸುತ್ತಾರಂತೆ. ಉಳಿದವರು ಸುರ್ಪನಖಿ ತರ ಕಾಣಿಸ್ತಾರಂತೆ ಅದು ಹೇಗೆ..?

ಇದೊಂದು ಹೇಳಿಕೆ ಅಷ್ಟೇ ಸಾಕು ರಾಮಾಯಣದಲ್ಲಿ ಬರುವ ಸುರ್ಪನಖಿಯನ್ನು ಎಷ್ಟೊಂದು ಕೆಟ್ಟದಾಗಿ ಬಿಂಬಿಸಿದ್ದಾರೆ ಅನ್ನೊದನ್ನ ತಿಳಿದುಕೊಳ್ಳಬಹುದು..  ಈಗ ಡೈರೆಕ್ಟಾಗಿ ಮ್ಯಾಟರಿಗೆ ಬರೋಣ..

ಸುರ್ಪನಖಿ ಕೂಡಾ ಒಂದು ಹೆಣ್ಣು. ಸಹಜವಾಗಿ ಎಲ್ಲರಂತೆ ಅವಳಿಗೂ ರಾಮನ ಮೇಲೆ ಪ್ರೀತಿ ಆಗುತ್ತೆ. ನೇರವಾಗಿ ರಾಮನೆದುರಿಗೆ ತನ್ನ ಪ್ರೀತಿಯನ್ನು ಪ್ರಸ್ತಾಪ ಮಾಡುತ್ತಾಳೆ. ಅದಕ್ಕೆ ಸಮ್ಮನಿರದ ರಾಮನು ಲಕ್ಷ್ಮಣನ ಬಳಿ ಕಳಿಸುತ್ತಾನೆ. ಅವಳ ಭಾವನೆಯನ್ನು ಕೇಳಿಸಿಕೊಂಡ, ಆತ ಸುರ್ಪನಖಿಯ ಮೂಗನ್ನು ಕತ್ತರಿಸುತ್ತಾನೆ. ಅಲ್ಲಾ… ತನಗೆ ಇಷ್ಟ ಇದ್ದರೆ, ಇಷ್ಟ ಇದೆ ಅಂತಾ ಇಲ್ಲವಾದರೇ ಇಲ್ಲ ಎಂದು ಹೇಳಿದರೆ ಆಗಿರ್ತಿತ್ತು. ‌ಆದರೆ ಲಕ್ಷ್ಮಣ ಮಾಡಿದ್ದೇನು?. ಆಕೆಯ ಮೂಗನ್ನು ಕತ್ತರಿಸಿ ಕುರುಪಿಯನ್ನಾಗಿ ಮಾಡಿದ. ಇದರಲ್ಲಿ ಅವಳದೇನು ತಪ್ಪಿದೆ..?

ಹೆಣ್ಣಾದವಳಿಗೆ ನಾಚಿಕೆ ಇರಬೇಕು ಅದೆಲ್ಲಾ ಬಿಟ್ಟು ಪ್ರೀತಿಸ್ತಿನಿ ಅಂತಾ ಹೇಳ್ತಿದ್ದಾಳೆ ಇವಳು ಅಂತಾ ಅವಳಿಗೆ ಅವಮಾನಿಸಲು ಹೋಗಿ, ಅವಳನ್ನು ಕುರುಪಿಯನ್ನಾಗಿ ಮಾಡ್ತಾನೆ…

ಹೇಗೆ ಒಬ್ಬ ಹುಡುಗನಿಗೆ ಹುಡುಗಿ ಇಷ್ಟ ಆದ್ರೆ.. ತಮ್ಮ ಪ್ರೀತಿಯನ್ನು ಪ್ರಸ್ತಾಪಿಸುವಂತೆ, ಸುರ್ಪನಖಿಯೂ ಕೂಡಾ ಹಾಗೆ ಮುಚ್ಚುಮರೆ ಇಲ್ಲದೆ ಇದ್ದುದ್ದನ್ನು ಇದ್ದ ಹಾಗೇ ಪ್ರೀತಿಯನ್ನು ಪ್ರಸ್ತಾಪಿಸಿದ್ದಾಳೆ. ಅವಳು ಪ್ರಪೋಸ್ ಮಢಿರುವುದು ಹೇಗೆ ತಪ್ಪಾಗುತ್ತೆ ಹೇಳಿ!? 

ಅದೇ , ಒಬ್ಬ ಹುಡುಗನಿಗೆ ಹುಡುಗಿ ಇಷ್ಟವಾದರೆ, ಪ್ರೀತಿಯನ್ನು ಎಕ್ಸಪ್ರೆಸ್ ಮಾಡುತ್ತಾರೆ. ಆ ಸ್ವಾತಂತ್ರ್ಯನವಿದೆ ಹುಡುಗನಿಗೆ. ಗಂಡಿನಂತೆ ಹೆಣ್ಣು ತನ್ನ‌ ಪ್ರೀತಿಯನ್ನು ಪ್ರಸ್ತಾಪಿಸಿದ್ದು ಘೋರ ತಪ್ಪೆಂಬಂತೆ ರಾಮಾಯಣದಲ್ಲಿ ಬಿಂಬಿಸಲಾಗಿದೆ. ತನ್ನ ಭಾವನೆ ಹಂಚಿರುವ ಸುರ್ಪನಖಿ ರಾಕ್ಷಸಿ ಹಾಗೇ ಕಾಣಿಸುತ್ತಾಳೆ ಎಂದರೆ ಇದು ನಿಜಕ್ಕೂ ವಿಪರ್ಯಾಸ. 

ಅವಳೇಗೆ ರಾಕ್ಷಸಿಯಾಗಲು ಸಾಧ್ಯ!. ಅವಳು ಪ್ರೇಮಮಯಿ...‌ಇಡೀ ಜೀವನ ಅವಳು ಮದುವೆಯಾಗದೇ ಬದುಕನ್ನ ನೂಕಿದವಳು. 

ಮೈತುಂಬಾ ಬಟ್ಟೆ ಹಾಕಿದ ಮಹಿಳೆಯರ ಮೇಲೆ  ಪ್ರತಿದಿನ ಅತ್ಯಚಾರಗಳು ನಡೆಯುತ್ತಿವೆ. ಮೈತುಂಬಾ ಬಟ್ಟೆ ಹಾಕಿದವರು ದೇವತೆ ತರ ಕಂಡಿದ್ರೆ ಅವರ ಮೇಲೆ ಅತ್ಯಚಾರಗಳೇಕೆ ಆಗುತ್ತವೆ, ದೇವತೆ‌ ಹಾಗೇ ಕಾಣಿಸಿದ ಮೇಲೆ ಕೈಮುಗಿಬೇಕಿತ್ತಲ್ವ..? ಇವೆಲ್ಲ ಹೇಳಿಕೆಗಳು ಹೆಣ್ಣಿಗೆ ತನ್ನ ಭಾವನೆಯನ್ನು ಹೇಳಿಕೊಳ್ಳದ ಹಾಗೇ ಮುಚ್ಚಿ ಇಡುವಂತೆ ಅವಳನ್ನು ಕುಗ್ಗಿಸುವ ಕುತಂತ್ರಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಗಂಡಸು ಯಾವ ಬಟ್ಟೆ ಹಾಕಿದರೂ, ಸಮಸ್ಯೆಯಾಗಿ ಕಾಣದ ನಮ್ಮ ರಾಜಕೀಯದವರಿಗೆ, ಹೆಣ್ಣು ಇಂಥದೆ ಬಟ್ಟೆ ಬಟ್ಟೆ ಹಾಕಬೇಕು. ಹಣೆ ಮೇಲೆ ಬೊಟ್ಟು ಇಡಬೇಕು. ಹೀಗೆ ಇರಬೇಕು ಎಂದು ಕಟ್ಟಪಡುಪಾಡುಗಳನ್ನು ಕಟ್ಟಿಬಿಟ್ಟಿದ್ದಾರೆ. ಅಂದಿನ ರಾಮಯಣದ ಕತೆಗಳಲ್ಲಿರುವ ಅಂಶಗಳು ಇಂದಿಗೂ ಸಮಾಜದಲ್ಲಿ ಬೇರೂರಿ ಹೆಮ್ಮರವಾಗಿ ಬೆಳೆದು ಬಿಟ್ಟಿವೆ. ಶತಮಾನಗಳೇ ಉರುಳಿದ್ರೂ ಕೂಡಾ ಎಷ್ಟೊಂದು ಗಟ್ಟಿಯಾಗಿ ನಿಂತಿವೆ ಇಂದಿಗೂ ಜೀವಂತವಾಗಿ ನೋಡ ಸಿಗುತ್ತವೆ.

                                                                                                                          - ಪೂಜಾ ಎಸ್‌, ಕಲಬುರಗಿ

Comments

Post a Comment

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...