" ಹುಟ್ಟು-ಸಾವುಗಳ ನಡುವಿನ ವೇಳೆಯನ್ನು ಬದುಕು ಎಂದು ಕರೆಯುತ್ತೇವೆ. ಈ ಬದುಕು ಕಾಲಕ್ಕೆ ಸಂಬಂಧಿಸಿದ್ದು. ಕಾಲ ಕೇವಲ ಗಡಿಯಾರವನ್ನವಲಂಬಿಸಿಲ್ಲ; ನಾಡಿ ಬಡಿತವನ್ನು, ಬದುಕುವ ಆಶೆ ಮತ್ತು ಸಾವಿನ ಸಾಧ್ಯತೆಯನ್ನು ಅವಲಂಬಿಸಿದ್ದು... ಪಿ.ಲಂಕೇಶ್ ಕಾಲದ ಪ್ರಜ್ಞೆ ನೈತಿಕ ಮತ್ತು ಸಾಮಾಜಿಕವಾದದ್ದು. ನಾನು ತುಂಬ ಚಿಕ್ಕವನಾಗಿದ್ದಾಗ ಕಂಡುಕೊಂಡ ಸತ್ಯ ಇದು... ಕಾಲದ ಪರಿವೆ ಕೇವಲ ಸಾಮಾಜಿಕವಲ್ಲ, ಅದು ಒಬ್ಬ ವ್ಯಕ್ತಿ ಮತ್ತು ಗುಂಪು ತನ್ನಲ್ಲಿ ಇರುವ ಭೂತಕಾಲದ ನೆನಪುಗಳನ್ನು, ಮೌಲ್ಯಗಳನ್ನು ವರ್ತಮಾನಕ್ಕೆ ಹೊಂದಿಸಿ ಭವಿಷ್ಯ ಕಾಲದತ್ತ ಅಡಿ ಇಡುವ ರೀತಿ ಕೂಡ. ಭಾರತೀಯ ಈ ದೃಷ್ಟಿಯಲ್ಲಿ ಕೊಂಚ ದುರ್ಬಲ... ಕಾಲದ ಆಟ ವ್ಯಕ್ತಿಯಿಂದಲೇ ಶುರುವಾಗುತ್ತದೆ. ಆತ ತನಗೆ, ತನ್ನವರಿಗೆ ಎಂದು ರೂಪಿಸಿಕೊಳ್ಳುವ ಆಶಯಗಳೆಲ್ಲ ಆತನ ಒಳ ಮಾರ್ದವಗಳನ್ನು, ಆತನ ವ್ಯಕ್ತಿತ್ವದ ಸಾಧ್ಯತೆಗಳನ್ನು ಅವಲಂಬಿಸಿದೆ. ನಾನು ನಾಳೆಯ ಹೊತ್ತಿಗೆ, ಇಷ್ಟು ಗಂಟೆಗೆ ಮಾಡಬೇಕಾದ್ದನ್ನು ಮಾಡದಿದ್ದರೆ ಅದು ಆತ್ಮವಂಚನೆ. ತನ್ನ ವೇಳೆಗೆ ತಾನು ಮಾಡಿಕೊಂಡ ಮೋಸ. ಈ ವಂಚನೆಯಿಂದಲೇ ಸಾಮೂಹಿಕ ವೇಳೆಯ ಬಗ್ಗೆ ನಿರ್ಲಕ್ಷ್ಯ ಶುರುವಾಗುತ್ತದೆ. ವರ್ತಮಾನದ ಕ್ರಿಯೆ ಮಂದವಾಗುತ್ತ ಹೋಗುತ್ತದೆ. ಕಾಲ, ದೇಶಕ್ಕೆ ವ್ಯಕ್ತಿಯ ಹೊಣೆ ತನ್ನ ಮೊನಚು ಕಳೆದುಕೊಳ್ಳುತ್ತದೆ. ಈ ಜಗತ್ತಿನಲ್ಲಿ ಏನಾದರೂ ಒಳ್ಳೆಯದು, ಮೌಲ್ಯ ಅನ್ನಿಸಿಕೊಳ್ಳುವಂಥದು ಉಳಿದಿದ್ದರೆ ಅದು ಸಮಯಕ್ಕೆ ಬದ್ಧವಾಗಿಯೇ ಉಳಿದಿದೆ; ಸೃಷ್ಟಿ...
ಮಕ್ಕಳಿಗಾಗಿ ಸಂವಿಧಾನ ಪುಸ್ತಕದ ಕರಿತು ಲೇಖಕಿ : ವಾಣಿ ಪೆರಿಯೋಡಿ ಈ ಪುಸ್ತಕವು ಮಕ್ಕಳಿಗೆ ಸಂವಿಧಾನವನ್ನು ಅರ್ಥ ಮಾಡಿಸಲು ಚಿಕ್ಕ ಚಿಕ್ಕ ಕತೆಯ ರೂಪದಲ್ಲಿ ಬರೆಯಲಾಗಿದೆ. ಪುಸ್ತಕ ಓದುವಾಗ ಬರುವ ಎಲ್ಲಾ ಕಥೆಗಳು ನಾವು ಶಾಲೆಯಲ್ಲಿ ಕೇಳಿದ ಪ್ರಶ್ನೆಗಳು ನೆನಪಾಗುತ್ತವೆ. ಚಿಕ್ಕವರಿದ್ದಾಗ ಸಾಕಷ್ಟು ಪ್ರಶ್ನೆಗಳು ಪುಟ್ಟ ತಲೆಯಲ್ಲಿ ಓಡುತಿರುತ್ತವೆ. ಆದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಸಿಗುವುದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಕೊಂಡಿರುತ್ತವೆ. ಜಾತಿ ತಾರತಮ್ಯ ಮತ್ತು ಮೇಲು ಕೀಳು ಇದಕ್ಕೆ ಸಂಭಂದಿಸಿದಂತೆ ಮಕ್ಕಳ ಮನಸಿನಲ್ಲಿರು ಪ್ರಶ್ನೆಗಳಿಗೆ ಉತ್ತರಗಳು ಈ ಪುಸ್ತಕದಲ್ಲಿ ಸಿಗುತ್ತವೆ. ಪುಸ್ತಕದಲ್ಲಿ ಒಟ್ಟು ೨೨ ಕಥೆಗಳಿವೆ ಪ್ರತಿ ಕತೆಯು ಪ್ರಶ್ನೆಯ ರೂಪದಲ್ಲಿಯೆ ಇವೆ. ಎಲ್ಲಾ ಕತೆಗಳು ಮಕ್ಕಳಿಗೆ ಇಷ್ಟ ಆಗುವ ಹಾಗೆ ಸರಳವಾಗಿ ಇರುವುದರಿಂದ ಮಕ್ಕಳ ಮನಸ್ಸಿಗೆ ಬೇಗ ನಾಟುತ್ತವೆ. ನಾವು ಶಾಲೆಯಲ್ಲಿ ಇದ್ದಾಗ ಕೆಲವು ಅನುಭವಗಳು ಆಗಿರುತ್ತವೆ. ದಲಿತರ ಮಕ್ಕಳು ದೂರ ಕುಳಿತುಕೊಳ್ಳುವುದು ಇಲ್ಲವಾದರೆ ಎಲ್ಲರ ಹಿಂದೆ ಕೊನೆಯಲ್ಲಿ ಕುಳಿತು ಕೊಳ್ಳುವುದು....
Comments
Post a Comment