ನೀಲು ನನ್ನ ಸಾಹಿತ್ಯದ ಬಹುಪಾಲು...


 
ನೀಲು ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. ನೀಲು ಎಂಬ ಈ ಕಿರು  ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ‌.  
                      ದಿನಕ್ಕೆ ಒಂದಾದರು ನೀಲು ಕವಿತೆ ಓದಿದಾಗ ಮಾತ್ರ ನನಗೆ ಸಮಾಧಾನ ಸಿಗೋದು....ಎನ್ನುವಷ್ಟರ ಮಟ್ಟಿಗೆ ನನ್ನೊಂದಿಗೆ ನೀಲು ಆವರಿಸಿದ್ದಾಳೆ...
 
ಈ ಕವಿತೆಯನ್ನು ನಾನಷ್ಟೆ ಇಷ್ಟ ಪಡುತ್ತೇನಾ?  ಇಲ್ಲ. ಓದಿದ ಪ್ರತಿಯೊಬ್ಬರು ನೀಲುವನ್ನು ಮೆಚ್ಚಿದ್ದಾರೆ ಹಾಗೆಯೇ ಮೆಚ್ಚುತ್ತಾರೆ ಎನ್ನುವ ಭರವಸೆಯೂ ಇದೆ. 
ಲಂಕೇಶರು ಪತ್ರಿಕೆ ನಡೆಸುತಿದ್ದಾಗ ದಿನಕ್ಕೊಂದು ನೀಲು ಕವಿತೆ ಅಚ್ಚು ಮಾಡುತಿದ್ದರು. ಎಷ್ಟೋ  ಜನ ಈ ಕವಿತೆಗಾಗಿಯೇ ಪತ್ರಿಕೆ ಓದಿದ ಉದಾಹರಣೆಗಳು ಇವೆ. ಹೊಸದೊಂದು ಓದುಗ ವರ್ಗವನ್ನೇ ಸೃಷ್ಟಿಸಿದ ಕೀರ್ತೀ ಲಂಕೇಶರ ನೀಲುವಿಗೆ ಸಲ್ಲುತ್ತದೆ. ಬರಿ  ಓದುಗ ವರ್ಗವನ್ನಷ್ಟೇ ಅಲ್ಲ ಎಷ್ಟೋ ಯುವ ಕವಿ / ಕವಯಿತ್ರಿಯರನ್ನೂ ಸೃಷ್ಟಿಸಿದೆ. 
 *ಏನಿದೆ ಈ ನೀಲುವಿನಲ್ಲಿ :*  ನನಗೆ ನಾನೆ ಈ ಪ್ರಶ್ನೆಯನ್ನ ಹಾಕಿಕೊಂಡರು ಬೇರೆಯವರು ಈ ಪ್ರಶ್ನೆ ಹಾಕಿದರು ನನ್ನ ಉತ್ತರ....ಏನಿಲ್ಲ ಎನ್ನುವ ಮರು ಪ್ರಶ್ನೆಯೇ...!!  ನೀಲು ಬಹಳ ಸರಳವಾಗಿ ಮೂಡಿಬಂದ ಸಾಲುಗಳು...ಇದರಲ್ಲಿ ಒಳಾರ್ಥ ಗಳು ಬಹಳಷ್ಟು ಬಳಸಿದ್ದಾರೆ‌...ಹುಟ್ಟಿನಿಂದ ಸಾವಿನ ವರೆಗೆ ಮನುಷ್ಯನ ಅನುಭವಕ್ಕೆ ಬರುವ ಎಲ್ಲವನ್ನೂ  ಹೇಳುವ ಪ್ರಯತ್ನ ನೀಲುವಿನಲ್ಲಾಗಿದೆ.  ನೋಡಲು ಸಣ್ಣ ಸಣ್ಣ ಸಾಲುಗಳಾದರು ಅದರಲ್ಲಿ ಅಡಗಿರುವುದು ಬಹುದೊಡ್ಡ ವಿಚಾರಗಳು.... 
ನನಗೆ ತುಂಬಾ ಇಷ್ಟವಾದ ನೀಲು!!!  ಇದು 

 "ಇಟ್ಟಿಗೆ ಪವಿತ್ರವಲ್ಲ 
ಜೀವ ಪವಿತ್ರ!!!*


         ಈ ಸಾಲು ಇಷ್ಟ ಪಡಲು ನನ್ನಲ್ಲಿ  ಕಾರಣ  ಇಲ್ಲ.
    ಆದರೆ ಇದು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ಎಂದು ನಾನು ನಂಬಿದ್ದೇನೆ. ಇದೊಂದೇ ಸಾಲು ಮಾತ್ರವಲ್ಲ .  ಪ್ರತಿಯೊಂದು ನೀಲು ಸರ್ವಕಾಲಕ್ಕೂ ಪ್ರಸ್ತುತವೇ... 
ಮೇಲೆ ಹೇಳಿದ ಸಾಲುಗಳನ್ನು ರಾಮ ಮಂದಿರ ಜೀರ್ಣೋದ್ಧಾರದ ಸಂದರ್ಭದಲ್ಲಿ ಬಹಳಷ್ಟು ಜನರ ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿತ್ತು. 
ಇಲ್ಲಿ ಪವಿತ್ರ ಎನ್ನುವ ಪದ ಎಲ್ಲರೂ ಮನಸ್ಸನ್ನೂ ಹೊಕ್ಕಿದ್ದೆ ಎಂದು ನನಗೆ ಅನಿಸುತ್ಯೇ...
ರಾಮ ಮಂದಿರ ಕಟ್ಟಲು ಪ್ರಾರಂಭವಾದಾಗಿನಿಂದಲು ಬಹಳಷ್ಟು ಜೀವ ಹಾನಿಗಳು ನಡೆದಿವೆ...
                ಇಲ್ಲೆ ನಾವು ಅರ್ಥ ಮಾಡಿಕೊಳ್ಳಬೇಕಿದೆ...ಇಟ್ಟಿಗೆಯಿಂದ ಕಟ್ಟಿದ ರಾಮ ಮಂದಿರಕ್ಕಾಗಿ ಸಾವಿರಾರು ಜೀವ ಹೋಗಿವೆ  ಎಂದರೆ...??? 
ಈ ಸಾಲುಗಳು ಇಷ್ಟಕ್ಕೆ ಸೀಮಿತಗೊಳ್ಳದೇ ಪವಿತ್ರ ಅಪವಿತ್ರತೆಯ ,  ಬಗ್ಗೆ ಬೆಳಕು ಚೆಲ್ಲುತ್ತದೆ. ಅಶ್ಪೃಶ್ಯತೆಯನ್ನು ವಿರೋಧಿಸುತ್ತೆ. 
ಯಾರೋ ಒಬ್ಬರು ದಲಿತ ಮೇಲ್ವರ್ಗದ ದೇವಸ್ಥಾನಕ್ಕೆ ಹೋದಾಗ ಅವನನ್ನು ಒಳಗೆ ಬಿಡುವುದಿಲ್ಲ. ದೇವಸ್ಥಾನ ಕಟ್ಟಿರುವುದು ಇಟ್ಟಿಗೆಯಿಂದಲೇ...ಆದರೆ ದಲಿತನ ಜೀವ ಅದೆಷ್ಟು?  ಮರುಕ ಪಟ್ಟಿರಬೇಕು.  
ಈ ಕವಿತೆಗಳಲ್ಲಿ ಯಾವುದೇ ವಿಷಯವಿದ್ದರು..‌ಅದು ಓದುಗರ ಕಣ್ಣಿಗೆ ಪ್ರೇಮ ಕವಿತೆಯಂತೆಯೇ ಕಾಣುತ್ತೆ...! 
ಆದರೆ ,,,,, ನೋವು , ನಲಿವು , ಸುಖ , ದುಃಖ, ಭಯ, ಕಾತುರತೆ ಪ್ರೀತಿ, ಪ್ರೇಮ ಎಲ್ಲವೂ ಅಡಗಿದೆ... 
 ಕೊನೆಯದಾಗಿ  ಹೇಳುವುದೆಂದರೆ ನೀಲು ಓದಿದ ಮೇಲೆಯೇ ನಾನು ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ್ದೇನೆ. ನೀಲು ನನ್ನ ಸಾಹಿತ್ಯದ ಬಹುಪಾಲು ನನ್ನಲ್ಲಿ ಸಾಹಿತ್ಯಾಸಕ್ತಿ ಹೆಚ್ಚುಗೊಳಿಸಿದ ನೀಲುವಿನ  ಕೆಲವನ್ನು ಅನುಕರಣೆ ಮಾಡಿದ್ದೇನೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು  ಬಾಸ್ ಲಂಕೇಶ್ ಅವರಿಗೆ ಕ್ಷೆಮೆ ಯಾಚಿಸುತ್ತೇನೆ...


                     ~ ಎಂ.ಕೆ.ಕೆಂಭಾವಿ

Comments

Post a Comment

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...