ರೈತ ಆಂದೋಲನ ಐದು ವರ್ಷ ಮುಂದುವರೆಯಬಹುದು : ರಾಕೇಶ್ ಟಿಕಾಯತ್ , ರೈತ ಹೋರಾಟಗಾರ

   ಕಳೆದ ಐದು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟವು ಮುಂದಿನ ಐದು ವರ್ಷಗಳವರೆಗೆ ಮುಂದುವರೆಯಬಹುದು ಎಂದು ಹೇಳಿರುವ ರೈತ ಮುಖಂಡ ರಾಕೇಶ್‌ ಟಿಕಾಯತ್‌, `ರೈತರು ಆಂದೋಲನವನ್ನು ತಮ್ಮ ದಿನನಿತ್ಯ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. 





ರೈತ ಹೋರಾಟವನ್ನು ಬೆಂಬಲಿಸಿ ಹಿಸ್ಸಾರ್‌ನಲ್ಲಿ ಫೆಬ್ರವರಿ 3ರಿಂದ ವಕೀಲರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿದ್ದ ಟಿಕಾಯತ್‌ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. 


`ಇದು ದೊಡ್ಡ ಆಂದೋಲನವೇ? ನಾವು ಕಳೆದ ಐದು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅವರು ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸಲು ಸಾಧ್ಯವಾದರೇ, ಆಂದೋಲವನ್ನು ಐದು ವರ್ಷ ಮುಂದುವರೆಸಲು ಏಕೆ ಸಾಧ್ಯವಿಲ್ಲ? ನಮ್ಮ ಆಂದೋಲನವೂ ಐದು ವರ್ಷಗಳವರೆಗೆ ಮುಂದುವರೆಯುತ್ತದೆ’ ಎಂದು ಮಾಧ್ಯಮದವರಿಗೆ ತಿಳಿಸಿದರು. 


`ಈ ಆಂದೋಲನವು ಇಡೀ ದೇಶದಲ್ಲಿ ಇನ್ನಷ್ಟು ಬಲಿಷ್ಠವಾಗಿ ಮುಂದುವರೆಯುತ್ತದೆ. ರೈತರು ತಮ್ಮ ಕೃಷಿ ಭೂಮಿ ಮತ್ತು ಆಂದೋಲನ ಎರಡರ ಬಗ್ಗೆಯೂ ಗಮನಹರಿಸಬೇಕು. ಅವರು ಕೃಷಿಯನ್ನು ಮಾಡಬೇಕು, ಹೋರಾಟದಲ್ಲಿಯೂ ಭಾಗವಹಿಸಬೇಕು’ ಎಂದರು. 


ಹಿಸ್ಸಾರ್‌ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಟೋಲ್‌ ಪ್ಲಾಜಾದಲ್ಲಿ ನಡೆದ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್‌ ಹೋರಾಟ ಮುಂದುವರೆಯುವುದಾಗಿ ಭಾವನೆ ವ್ಯಕ್ತಪಡಿಸಿದ್ದಾರೆ. 


ರೈತ ಹೋರಾಟ ಎಲ್ಲಿಯವರೆಗೂ ಮುಂದುವರೆಯಲಿದೆ ಎಂದು ಹಲವು ಜನರು ಕೇಳಿದಾಗ `ಐದು ತಿಂಗಳ ದೊಡ್ಡ ಆಂದೋಲನ ಸುಧೀರ್ಘವಾದದ್ದೇ? ಎಂದು ರೈತರನ್ನು ಪ್ರಶ್ನಿಸಿದ ಟಿಕಾಯತ್‌, ‘ನಾವು ಮನೆ ಮತ್ತು ಗದ್ದೆಯಲ್ಲಿ ಕೆಲಸ ಮಾಡುವಂತೆ ಆಂದೋಲನವನ್ನು ನಮ್ಮ ದಿನಚರಿಯ ಒಂದು ಭಾಗವಾಗಿಸಬೇಕು. ಪ್ರಸ್ತುತ ಆಂದೋಲನ ನಡೆಯುತ್ತಿರುವ ರೀತಿಯಲ್ಲಿ ತಿಂಗಳುಗಟ್ಟಲೆ ಮುಂದುವರೆಯಬಹುದು. ಅದರ ಭವಿಷ್ಯ ನಮಗೆ ತಿಳಿದಿಲ್ಲ; ಎಂದರು. 


ಬಿಜೆಪಿ ನಾಯಕರ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಕೇಳಿದಾಗ ಬಿಜೆಪಿ ನಾಯಕರು ಕಾರ್ಯಕ್ರಮಗಳನ್ನು ನಡೆಸಿದರೆ, ರೈತರೂ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು. 


ರೈತ ಆಂದೋಲನವನ್ನು ವರದಿ ಮಾಡಿದ್ದ ಪತ್ರಕರ್ತ ರಾಜೇಶ್ ಕುಂದು ವಿರುದ್ಧ ಪ್ರಕರಣ ದಾಖಲಾಗಿರುವುದರ ಕುರಿತು ಮಾತನಾಡಿದ ಬಿಕೆಯು ಮುಂಖಡರು, ‘ಆಂದೋಲನವನ್ನು ಮುಚ್ಚಿಹಾಕಲು ಪತ್ರಕರ್ತರನ್ನು ಗುರಿಯಾಗಿಸಬಾರದು. ರೈತ ಆಅಂದೋಲನಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ಹಿಸ್ಸಾರ್‌ ಬಾರ್‌ ಅಸೋಸಿಯೇಷನ್‌ ಉಚಿತವಾಗಿ ಹೋರಾಡುವುದಾಗಿ ಈಗಾಗಲೇ ಘೋಷಿಸಿದೆ’ ಎಂದು ತಿಳಿಸಿದರು. 

Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...