ಮಂಜುನಾಥ ಮಂಜಮ್ಮನಾದದ್ದು...

 ಗಂಡಸಾಗಿ ಹುಟ್ಟಿ ಹೆಣ್ಣಿನ ರೂಪ ಪಡೆಯುವುದೆಂದರೆ ಸಾಮಾನ್ಯವಾದ ಮಾತಲ್ಲ ಆದರೂ ಅನೇಕರು ತಾವು ಹುಟ್ಟಿದ ಲಿಂಗವನ್ನು ತೊರೆದು ಲಿಂಗ ಪರಿವರ್ತನೆಯಾದ ಹಲವಾರು ಉದಾಹರಣೆಗಳನ್ನು ಕಾಣಬಹುದು. ಅಂತವರಲ್ಲಿ ಮಂಜಮ್ಮ ಜೋಗತಿ ಒಬ್ಬರು ಇವರು ಹುಟ್ಟಿದ್ದು ಗಂಡಸಾಗಿ ಮೂಲ ಹೆಸರು ಮಂಜುನಾಥ ಎಂದು ಅವರು ಹುಟ್ಟಿದ ಲಿಂಗದ ಮೇಲೆ ಅವರಿಗೆ ಅಸಮಧಾನವಿರುವಂತೆ ಕಾಣುತ್ತದೆ. ಹೆಣ್ಣಿನನಂತೆ ಇರಬೇಕು ಎಂದು ಕನಸು ಕಾಣುತಿದ್ದ ಮಂಜುನಾಥ ಸಂಪೂರ್ಣ ಹೆಣ್ಣಿನ ತರಹ ಬದಲಾಗ ತೊಡಗಿದ ಅಮ್ಮ ಅಡುಗೆ ಮಾಡುವಾಗ ಅವರಿಗೆ ಸಹಾಯ ಮಾಡುವುದು, ರಂಗೋಲಿ ಬಿಡುವುದು , ಶಾಲೆಯಲ್ಲಿ ಹೇಳಿದ ನೋಟ್ಸ್ ಗಳನ್ನು ಹುಡುಗಿಯರ ಹತ್ತರವೇ ತೆಗೆದು ಕೊಳ್ಳುವುದು ಅವರ ಜೊತೆಯಲ್ಲಿಯೇ ಆಟ ಆಡುವುದು ಇತ್ಯಾದಿಗಳನ್ನು ಮಾಡುತಿದ್ದರು..ಇನ್ನೂ ತುಂಬಾ ಸುಲಭವಾಗಿ ಹೇಳಬೇಕೆಂದರೆ ಒಂದು ಹೆಣ್ಣಿಗೆ ಮೂಡುವ ಭಾವನೆಗಳು ಮೂಡತೊಡಗಿದವು ಹಾಗೆ ದೇಹದಲ್ಲಿಯೂ ಕೆಲವಷ್ಟು ಪರಿವರ್ತನೆಗಳಾಗತೊಡಗಿದವು. ಮಗನ್ನು ಹೇಗಾದರೂ ಮಾಡಿ ಸರಿಮಾಡಬೇಕೆಂದು ಆಸ್ಪತ್ರೆ ದೇವರು ದಿಂಡಿರು ಇತ್ಯಾದಿ ಪ್ರಯತ್ನಗಳು ಮಾಡಿದರೂ ಅದರಿಂದ ಯಾವುದೇ ಉಪಯೋಗವಾಗಲಿಲ್ಲ. ಇವನ್ನೆಲ್ಲವನ್ನು ನೋಡಿದ ತಂದೆ ತಾಯಿಗೆ ಬೇಸರವಾಗಿ ಬೈಯುವುದು ಹೊಡೆಯುವುದ ಮಾಡುತಿದ್ದರು.

ಮಂಜುನಾಥನಲ್ಲಿ ಹೇಗೆ ಬದಲಾವಣೆಗಳು ಆಗುತಿದ್ದವೋ ಹಾಗೆ ಸಮಾಜದಲ್ಲಿ ಅವರನ್ನು ನೋಡುವ ರೀತಿ ನೀತಿಗಳು ಬದಲಾಗತೊಡಗಿದವು.

ನಂತರದ ದಿನಗಳಲ್ಲಿ ಮಂಜುನಾಥ ಏನು ಮಾಡಿದರೂ ಬದಲಾಗುವುದಿಲ್ಲ ಎಂದು ಅರಿವಾದ ತಂದೆ ತಾಯಿಗಳು ಒಪ್ಪಿಕೊಂಡು ಹೊಸಪೇಟೆ ಹುಲಿಗೆಮ್ಮನ ಜೋಗತಿ ಮಾಡುವ ತೀರ್ಮಾನ ಮಾಡಿದರು. ಹುಲಿಗಿಗೆ ಕರೆದುಕೊಂಡು ಹೋಗಿ ಅಲ್ಲಿ ಉಡುದಾರ ಹರಿದು ಮುತ್ತು ಕಟ್ಟುತ್ತಾರೆ. ಇವೆಲ್ಲದರ ಮಧ್ಯ ಮಂಜುನಾಥ ಮಂಜಮ್ಮ ಜೋಗತಿ ಆಗುತ್ತಾನೆ.

ಮುತ್ತುಕಟ್ಟಿದ ನಂತರ ಮಂಜಮ್ಮ ಜೋಗತಿಯ ನಿಜ ಜೀವನ ಆರಂಭವಾಗುತ್ತೆ. ದಾವಣಗೆರೆಯಲ್ಲಿ ಬಿಕ್ಷಾಟನೆ ಮಾಡಿ ತಮಗೆ ಬೇಕಾದ ವಸ್ತುಗಳನ್ನು ತೆಗದುಕೊಂಡು ಜೀವನ ಮಾಡುತಿದ್ದರು. ಮಂಜಮ್ಮ ಜೋಗತಿಯ ಮೇಲೆ ಅತ್ಯಾಚಾರದ ಪ್ರಯತ್ನವೂ ಆಗುತ್ತೆ ಒಂದು ದಿನ ದಾವಣಗೆರೆಯಲ್ಲಿ ಬಿಕ್ಷಾಟನೆ ಮುಗಿಸಿಕೊಂಡು ಕುಕುವಾಡಕ್ಕೆ ಹೋಗಬೇಕಾದರೆ ವಿದ್ಯಾರ್ಥಿ ಭವನ ಹತ್ತಿರ ಬಸ್ ಇಳಿದು ನಡೆದುಕೊಂಡು ಹೋಗಬೇಕಾದರೆ ನಾಲ್ಕೆöÊದು ಜನ ಹುಡುಗರು ಕುಡಿಯುತಿದ್ದರು ಹೋಗುತಿರುತ್ತಾರೆ ಮಂಜಮ್ಮನಿಗೆ ಕರೆದರು ಭಯದಿಂದ ಜೋಗತಿ ಅವರ ಹತ್ತಿರ ಹೋಗುತ್ತಾರೆ. ಎಲಿ ನನ್ನ ಹತ್ತಿರ ಇದ್ದ ೭೦ ರೂಪಾಯಿ ಕಸಿದುಕೊಳ್ಳುತ್ತಾರೆ ಎನ್ನುವ ಭಯದಿಂದಲೇ ಇದ್ದರೂ ಕೊನೆಗೂ ಹುಡುಗರು ಪಡಲಿಗೆ ಎಲ್ಲಿದ್ದ ೭೦ ರೂಪಾಯಿ ಕಸಿದುಕೊಂಡು ಸೀರೆ ಎಳೆದು, ಮೈಮೇಲೆ ಇದ್ದ ಬ್ಲೌಸ್ ಹರಿದು ಹಿಂಸೆ ಮಾಡಿದ್ದರು, ಆವಾಗ ಮಂಜಮ್ಮನ ಸಹಾಯಕ್ಕೆ ಯಾರು ಬಂದಿರಲಲ್ಲ ಜೋಗತಿ ಎಂದರೂ ಅವರು ಬಿಟ್ಟಿರಲಿಲ್ಲವೆಂದು ಮರುಕ ಪಟ್ಟಿದ್ದಾರೆ. ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದರೂ ಅವರು ಯಾವತ್ತೂ ದೃತಿಗೆಡದೇ ಜೀವನವನ್ನು ಮುನ್ನಡೆಸುತ್ತಾರೆ. ತೃತಿಯ ಲಿಂಗಿಗಳೆAದರೆ ಬರಿ ಟೋಲ್ ಗಳಲ್ಲಿ ಕೈ ಬಡಿದು ಹಣ ಕೇಳುವುದು, ಮತ್ತು ವ್ಯಭಿಚಾರ ಮಾಡುವುದು ಇಂತ ಯಾವುದೇ ಕೆಲಸ ಮಾಡಲಿಲ್ಲ. ಮಂಜಮ್ಮ ಜೋಗತಿ ಅವರು ಆ ರೀತಿ ಮಾಡಿದ್ದರೆ ಇವತ್ತು ನಮ್ಮೆಲ್ಲರ ಮನದ ಮಾತಾಗಿರಲು ಸಾದ್ಯವಾಗುತ್ತಿರಲಿಲ್ಲ.

ಸಣ್ಣ ಮಕ್ಕಳಿಗೆ ಟ್ಯೂಷನ್ ಹೇಳುವುದು. ಬೀದಿ ಬೀದಿಗಳಲ್ಲಿ ಇಡ್ಲಿ ಮಾರಿ ತನ್ನ ಜೀವನ ನಿರ್ವಹಿಸುತ್ತಾರೆ. ಇದರ ನಡುವೆ ಮ್ತಿಕಲ್ ಬಸಪ್ಪ ಮತ್ತು ಕಾಳವ್ವ ಜೋಗತಿ ಹತ್ತಿರ ಜೋಗತಿ ನೃತ್ಯ , ಚೌಡಿಕಿ ಪದಗಳನ್ನು ಕಲಿತು ಜನಪದವನ್ನು ತಮ್ಮ ಜೀವನದ ಭಾಗವಾಗಿ ಮಾಡಿಕೊಂಡು ಬದುಕುತ್ತಾ ದೇಶಾದ್ಯಂತ ಜಾನಪದ ಕಾರ್ಯಕ್ರಮ ಕೊಟ್ಟಿದ್ದಾರೆ. ಜಾನಪದದಿಂದಲೇ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ಜಾನಪದ ಅಕಾಡೆಮಿ ಅದ್ಯಕ್ಷರಾಗಿ ತಮ್ಮ ವಿಶಿಷ್ಟ ಸೇವೆ ಮಾಡುತಿದ್ದಾರೆ. ಈ ಹುದ್ದೆಗೇರಿದ ಮೊದಲ ತೃತೀಯ ಲಿಂಗಿ ಎನುವ ಹೆಸರಿಗೆ ಮನ್ನಣೆ ಪಡೆದಿದ್ದಾರೆ. ಈ ಎಲ್ಲಾ ಅಸಾಧಾರಣ ಸೇವೆಯನ್ನು ಕಂಡ ಭಾರತ ಸರ್ಕಾರ ಮಂಜಮ್ಮ ಜೋಗತಿಯವರಿಗೆ ೨೦೨೧ ನೆ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಮಂಜಮ್ಮ ಜೋಗತಿಯರ ಜೀವನವನ್ನು ನೋಡಿದಾಗ ನಡುವೆ ಸುಳಿವಾತ್ಮ ಗಂಡೂ ಹೆಣ್ಣೆಂಬ ಪರಿವೇ ಇಲ್ಲ ಎನ್ನುವ ಮಾತು ನಿಜವೆನಿಸುತ್ತೆ. ಜೀವನದಲ್ಲಿ ಎಲ್ಲಾ ಇದ್ದೂ ಏನನ್ನೂ ಮಾಡದವರಿಗೆ ಮಂಜಮ್ಮ ಜೋಗತಿಯವರ ಜೀವನ ಸ್ಪೂರ್ತಿಯಾಗಬೇಕು. ತೃತೀಯ ಲಿಂಗಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನು ಎನ್ನುವುದಕ್ಕೆ ಉದಾಹರಣೆಯಾಗಿದ್ದು, ತೃತೀಯ ಲಿಂಗಿಗಳಿಗೂ ಸಮಾನ ಅವಕಾಶಗಳು ಸಿಗಬೇಕು ಮತ್ತು ಎಲ್ಲರೂ ಅವರನ್ನು ಗೌರವಿಸುವುದು ಅವಶ್ಯಕವಾಗಿದೆ.



                                                     

                                                                           ಮಾಳಿಂಗರಾಯ ಕೆಂಭಾವಿ  

8197057539


Comments

Post a Comment

Popular posts from this blog

ಹುಟ್ಟು ಮತ್ತು ಸಾವುಗಳ ನಡುವೆ...

ಕಥಾ ಸಂವಿಧಾನ

ದೇಶವೆಂದರೆ