ಬಿರಿಯಾನಿಗೆ ಜಾತಿ, ಮತ ಎಲ್ಲಿದೆ?
ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು ಇಷ್ಟಪಟ್ಟರೂ ಸೇವಿಸುವ ಆಹಾರ ಪದ್ಧತಿಯಾಗಿದೆ. ಆಹಾರ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ಮಾಂಸಹಾರವೇ ನಮ್ಮ ದೇಶದ ಮೂಲ ಆಹಾರ ಎಂದು ಗೊತ್ತಾಗುತ್ತದೆ. ಇತ್ತೀಚಿನ ಕೆಲವು ಆಹಾರ ಸಂಸ್ಕೃತಿಯು ಪಲ್ಲಟವಾಗುತ್ತಿರುವ ಆಹಾರ ರಾಜಕೀಯವಾಗುತ್ತಿರುವುದು ದುರಂತ. ಇಷ್ಟೆಲ್ಲಾ ಆಹಾರದ ಬಗ್ಗೆ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ... ಅನ್ನಪೂರ್ಣಿಯ ಬಗ್ಗೆ ಹೇಳಲು... ಅನ್ನಪೂರ್ಣಿ ನಯನತಾರ ಅಭಿನಯದ ಚಿತ್ರ ಒಟಿಟಿಯಲ್ಲಿ ಸದ್ದು, ಚರ್ಚೆಯಾಗುತ್ತಿರುವ ಸಿನಿಮಾ ನಾಯಕಿಯರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ತನಗೆ ಇಷ್ಟವಾದ ಕನಸನ್ನು ಕಲೆ ಹಾಕಿಕೊಂಡು ಭಾರತಕ್ಕೆ ಮಾಸ್ಟರ್ ಸೆಫ್ ಆಗಬೇಕು ಎಂದು ನೋಡುವ ಸಿನಿಮಾ...