ಅಂಬಾನಿ ಅದಾನೀಸ್ ಆಸ್ಥಾನದಲ್ಲಿ ಪ್ರಧಾನಿಯೇ ನರ್ತಕಿಯಾದರೆ?! ನೆನಪಿದೆಯಾ? ಕಳೆದ ಲೋಕಸಭಾ ಚುನಾವಣೆಗೆ ಮುನ್ನಾ ಮೋದಿಯವರ ನಾಲಿಗೆ ನುಡಿದ ಒಂದು ಮಾತು- “ನಾವು ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆ, ಜೀರೋ ಮಾಡುತ್ತೇವೆ.” – ಈ ಮಾತನ್ನು ಬಿಜೆಪಿಯವರು ದೇಶದ ಉದ್ದಗಲಕ್ಕೂ ಜಪಿಸಿದರು. ಮೋಡಿ ಹಾಕಿದರು. ಮತದಾರರು ಮರುಳಾದರು. ಆಯ್ತು, ಬಿಜೆಪಿ ಅಧಿಕಾರಕ್ಕೂ ಬಂತು. ಮೋದಿಯವರು ಪ್ರಧಾನಿಯೂ ಆದರು. ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆಂದ ಮೋದಿಯ ಬಿಜೆಪಿ ಸರ್ಕಾರ ಮಾಡಿದ್ದೇನು? ಭೂ ಸ್ವಾಧೀನ ಸುಗ್ರೀವಾಜ್ಞೆ ತಂದಿತು! ರೈತರನ್ನು ಭೂಮಿಯಿಂದ ಕಿತ್ತೆಸೆದು ಅವರನ್ನು ಭೂಹೀನರನ್ನಾಗಿಸಿ ರೈತರೇ ಶೂನ್ಯವಾಗುವÀ ಕಾಯಿದೆ – ಈ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯಿದೆ! ಸ್ವಲ್ಪ ಯೋಚನೆ ಮಾಡಿ- ಭೂಮಿ ಇಟ್ಟುಕೊಂಡವನು ಆತ್ಮಹತ್ಯೆ ಮಾಡಿಕೊಂಡರೆ ತಾನೇ ಅದು ರೈತನ ಆತ್ಮಹತ್ಯೆ? ಭೂಮಿಗೆ ಅಂಟಿಕೊಂಡು ಜೀವಿಸುವ ರೈತರನ್ನು ಉಳಿಸಿ ಅವರ ಆತ್ಮಹತ್ಯೆಯನ್ನು ಶೂನ್ಯ ಮಾಡುವ ಬದಲು ಭೂಮಿಯಿಂದ ರೈತರನ್ನು ಕ್ರೂರವಾಗಿ ಕಿತ್ತೆಸೆÀದು ರೈತರನ್ನೇ ಶೂನ್ಯ ಮಾಡುವುದೇ ಈ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಮಸೂದೆಯೆಂಬ ಈ ಜೇಡರ ಬಲೆಯ ಕಾರ್ಯಕ್ರಮ. ಭಾರತದ ಭೂಮಿಯ ಜೀವಂತಿಕೆಯನ್ನು ಅರಿತವರು, ಇಂಥ ಭೂ ಸ್ವಾಧೀನ ಕಾನೂನು ಮಾಡಲಾರರು. ಭಾರತದಲ್ಲಿ ಭೂಮಿ ಅಂದರೆ ಒಂದು ವೃಕ್ಷ ಇದ್ದಂತೆ. ಆ ವೃಕ್ಷ ಆಧರಿಸಿ ಪಶು, ಪಕ್ಷಿ, ಜಾನುವಾರುಗಳು ತಮ್ಮ ಬದುಕು...
Posts
- Get link
- X
- Other Apps
ಮೀಸಲಾತಿಯ ಹರಿಕಾರ ಶಾಹು ಮಹಾರಾಜ … ಚತ್ರಪತಿ ಶಾಹು ಮಹಾರಾಜ ಹುಟ್ಟಿದ್ದು ಜೂನ್ 26 1874 ರಂದು ಶಾಹುರವರ ಮೊದಲ ಹೆಸರು ಯಶವಂತರಾವ್ ಘಟ್ಲೆ ಅವರ ತಂದೆಯ ಹೆಸರು ಜಯಸಿಂಹರಾವ್ ಘಟ್ಲೆ ತಾಯಿ ರಾಧಾಬಾಯಿ ಇವರು ಮೂಲತಃ ಕೊಲ್ಲಾಪುರದವರು. ರಾಣಿ ಆನಂಧಿಬಾಯಿಯವರು ಮಾರ್ಚ್ 11 1884 ರಂದು ಶಾಹುರನ್ನು ದತ್ತು ತೆಗೆದುಕೊಂಡರು. ಶಾಹುರವರಿಗೆ 1894ರಂದು ಮಹಾರಾಜರಾಗಿ ಪಟ್ಟಾಭಿಷೇಕವಾಗುತ್ತದೆ. ಕ್ರಿ.ಶ 1900ರಲ್ಲಿ ಒಂದು ಘಟನೆ ನಡಿಯುತ್ತದೆ. ರಾಜನಾದವನು ಗಂಗಾ ಘಾಟ್ ಎಂಬಲ್ಲಿ ಸ್ನಾನ ಮಾಡಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ರಾಜನಿಗೆ ಬ್ರಾಹ್ಮಣರು ಮಂತ್ರಗಳನ್ನು ಪಟಿಸಬೇಕಾಗಿರುತ್ತದೆ. ಆದರೆ ಬ್ರಾಹ್ಮಣರು ರಾಜನಿಗೆ ಪಟಿಸಬೇಕಾದ ಮಂತ್ರಗಳನ್ನು ಹೇಳುವುದಿಲ್ಲ ಬದಲಾಗಿ ಶೂದ್ರರ ಮಂತ್ರಗಳನ್ನು ಹೆಳುತ್ತಾರೆ. ಇದನ್ನರಿತ ರಾಜರ ಆಪ್ತರೊಬ್ಬರು ರಾಜರಿಗೆ ಈ ವಿಚಾರವನ್ನು ತಿಳಿಸುತ್ತಾರ. ಕೂಡಲೇ ಶಾಹು ಮಹಾರಾಜರು ಪುರೋಹಿತರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪುರೋಹಿತರು ಹೇಳುತ್ತಾರೆ ನೀವು ಶೂದ್ರರಾಗಿರುವುದರಿಂದ ಶೂದ್ರ ಮಂತ್ರಗಳನ್ನೆ ಹೇಳಬೇಕಾಗುತ್ತದೆ. ಎಂದು ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ. ಆಗ ಶಾಹು ಮಹಾರಾಜರು ಒಬ್ಬ ಮಹಾರಾಜನಾಗಿರುವ ನನಗೆ ಬ್ರಾಹ್ಮಣರಿಂದ ಶೋಷಣೆಯಾಗುತಿದೆ ಇನ್ನು ಸಾಮಾನ್ಯ ಜನರಿಗೆ ಇವರಿಂದ ಇನ್ನೆಷ್ಟು ಶೋಷಣೆಯಾಗುತ್ತಿರ ಬಹುದು ಎಂದು ಮನದಲ್ಲೇ ಮರುಕ ಪಡುತ್ತಾರೆ. ಬ್ರಾಹ್ಮಣಶಾಹಿಗ...
ಲಂಕೇಶರ ಕವಿತೆಗಳು
- Get link
- X
- Other Apps
ನಡುರಾತ್ರಿಯ ಕನಸು ನನಗೆ ಕಂಪನ ತರುವುದು ನೂರಾರು ವರ್ಷಗಳ ಹಳೆ ಮನೆಯ ಬೀಳಿಸುವಾಗ ಅಲ್ಲಿ ತೂಗಿದ ತೊಟ್ಟಿಲು, ಪ್ರಸ್ತಗಳ ಪ್ರಸ್ತಾಪವೇ ನಿನ್ನ ತುಂಬುವುದು ***** ಕವಿತೆಗಳುಹುಟ್ಟು ಹಠವಾದಿಯೊಬ್ಬ ಕವಿಯಾಗಲು ಪಣತೊಟ್ಟು ನಿತ್ಯ ಪದಭೇದಿಯಲ್ಲಿ ಬಳಲಿ ಹಲ್ಲು ಕಡಿಯುತ್ತಿದ್ದಾಗ ವಸಂತದ ಮಾವಿನ ಮರ ಕೋಗಿಲೆಯ ಕಂಠದಲ್ಲಿ ಹಾಡಿ ತನಗೆ ಗೊತ್ತಿಲ್ಲದೆ ಕವಿಯಾಯಿತು ಲಕ್ಷಾಂತರ ಕವನ, ಗೀತೆ, ಪುರಾಣಗಳು ಚುಂಬನ ಆಲಿಂಗನಗಳು ಶ್ರದ್ಧೆ, ಭಕ್ತಿಯ ಅವಶೇಷಗಳು ಅವನ ನಗೆಯಲ್ಲಿ ಪ್ರತ್ಯಕ್ಷವಾಗಿ ನಾನು ಜ್ವಾಲೆಯಾಗಿ ಉರಿಯತೊಡಗುವೆ ನಾನು ಬಲ್ಲ ಹುಡುಗನೊಬ್ಬ ಜನಪ್ರಿಯ ಕಾದಂಬರಿಯೊಂದರಲ್ಲಿ ಪಾತ್ರವಾಗಿ ಓದಿಕೊಂಡಾಗಲೇ ನನಗೆ ಅರ್ಥವಾದದ್ದು ಸಹಸ್ರಾರು ವರ್ಷಗಳಿಂದ ನನ್ನ ಅಂತರಂಗದಲ್ಲಿ ಸೇರಿಹೋಗಿರುವ ಶಬ್ದ, ಚಿತ್ರ, ಅರ್ಥಗಳು ನಿನ್ನ ಸಂಗದಲ್ಲಿ ಸಂಯೋಜನೆಗೊಂಡು ಪ್ರೇಮ ಅನ್ನಿಸಿಕೊಂಡಿತು ಈ ನನ್ನ ಸಾಲುಗಳನ್ನು ಕವನಗಳೆಂದು ಹೇಗೆ ಕರೆಯಲಿ ? ನೀನೇ ಬಲ್ಲಂತೆ ಇವೆಲ್ಲ ವಿರಹದ, ಕಾತರದ , ನಿರಾಶೆಯ , ಚುಂಬನದ ಆಲಿಂಗನದ ಗುರುತುಗಳು, ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ ನಾನು ಕತ್ತಲೆಯ ಭಿತ್ತಿಯ ಮೇಲೆ ಚಿತ್ರಿಸಿದ ನಿಟ್ಟುಸಿರುಗಳು ***** ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ… ನಾವು ಪ್ರೀತಿಸುವ ವ್ಯಕ್ತಿಯಲ್ಲಿ ತಪ್ಪು ಕಂಡು ಹಿಡಿವ ಕೆಲಸ ಓಯಸಿಸ್’ನ...
ಹೊಳೆ... ಕವನ ಸಂಕಲನ- ಸಂಜೆ ಐದರ ಮಳೆ.
- Get link
- X
- Other Apps
ಹೊಳೆ... ಕವನ ಸಂಕಲನ- ಸಂಜೆ ಐದರ ಮಳೆ. -------------------------------------------- ನಡುಹಗಲು ಸ್ವಪ್ನಿಸಿದ ಹೊಳೆ ತಂಪಿನ ಸ್ಯಾಂಪಲ್ಲುಗಳ ತಳ್ಳಿ ದಡದ ರಂಜದ ಗಿಡದ ನನ್ನ ಕಾಲೆಡೆಯಲ್ಲಿ ಬಟ್ಟಗಣ್ಣವಳೆ ಎಳೆಯುತ್ತಿದೆ, ಎದೆಯನಿರ್ಧಾರವನು ಅಳೆಯುತ್ತಿದೆ- ಬಿಸಿಲ ಧಗೆ ಮೈಲಿಗೆ ಪರಿಹರಿಸುವಾತುರದ ಬಗೆ ತೆರೆಯ ಕರೆ ಕೂಗಾಗಿ ಚಾಪಲ್ಯ ಮಾಗಿ ಅತ್ಯಗತ್ಯತೆ ಉಟ್ಟಿದ್ದ ಕಳಚಿ ಧುಮುಕಬೇಕಿನ್ನೇನು... ಆಗ ಪ್ರತಿಮೆ ನಿಲ್ಲುವ ಮೈ ಬಿಳುಚಿ. ಇಲ್ಲೆದ್ದು ಮುಳುಗಿ ಮತ್ತೆ ಆಲ್ಲೆದ್ದು ಹೋಯಿತೋ ಎನುವಲ್ಲಿ ನನ್ನತ್ತಲೇ ಕದ್ದು ಧಾವಿಸಿದೆ ತೀರಹೊಕ್ಕಳ ಸಾವು ಹಾವು. ನೋಡುತ್ತಲಿದ್ದಂತೆ ಆ ಜಂತು ಹೆಸರಿನ ಭೀತಿ ನೀತಿ ಸಂಸ್ಕಾರ ಆಚಾರ ಜಾತಿ ಕೊನೆಗೆ ನೀನೇ ಆಗಿ ದಿಟ್ಟಿಸಿರೆ ನಲ್ಲೆ ಸ್ನಾನ ಸುಖ ಇನ್ನೆಲ್ಲೆ ? -ಕೆ ಎಸ್ ನಿಸಾರ್ ಅಹಮದ್.
ದೀಪಾರತಿ
- Get link
- X
- Other Apps
ದೀಪಾರತಿ.... ಕವನ ಸಂಕಲನ- ನಿತ್ಯೋತ್ಸವ. ------------------------------------------- ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ, ಕುಡಿ ಚಾಚಿದೆ ಇಲ್ಲಿ. ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ; ಗುಡಿ ಮೀರಿದೆ ಇಲ್ಲಿ. ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ, ಜನ ಸಮ್ಮತಿಯಲ್ಲಿ; ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ, ನವ ಸದ್ಗತಿಯಲ್ಲಿ. ನಿನ್ನದೆ ನೆಲೆ, ನಿನ್ನದೆ ಮನೆ; ನಿನ್ನೆದೆಯೊ ಉದಾರ; ನಾನೂಳಿಗಕಿರುವಲ್ಪನು- ನೀ ವಾರಸುದಾರ. ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ; ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ. -ಕೆ ಎಸ್ ನಿಸಾರ್ ಅಹಮದ್.
ಅವ್ವ ಕವಿತೆ...
- Get link
- X
- Other Apps
ಅವ್ವ... ನನ್ನವ್ವ ಫಲವತ್ತಾದ ಕಪ್ಪು ಮಣ್ಣು ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು, ಹೆಂಟೆಗೊಂದು ಮೊಗೆ ನೀರು ಹಿಗ್ಗಿ; ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು, ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ ಹೆಸರು ಗದ್ದೆಯ ನೋಡಿಕೊಂಡು, ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು. ಸತ್ತಳು ಈಕೆ: ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ? ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ? ಎಷ್ಟೋ ಸಲ ಈ ಮುದುಕಿ ಅತ್ತಳು ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ; ಎಷ್ಟುಸಲ ಹುಡುಕುತ್ತ ಊರೂರು ಅಲೆದಳು ತಪ್ಪಿಸಿಕೊಂಡ ಮುದಿಯ ಎಮ್ಮೆಗೆ? ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ; ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ; ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ; ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ; ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ. ಬನದ ಕರಡಿಯ ಹಾಗೆ ಚಿಕ್ಕಮಕ್ಕಳ ಹೊತ್ತು ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು. ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು; ಸಣ್ಣತನ, ಕೊಂಕು, ಕೆರೆದಾಟ ಕೋತಿ...
ವಿಶ್ವಮಾನವ ಗೀತೆ
- Get link
- X
- Other Apps
ಅನಿಕೇತನ ಓ ನನ್ನ ಚೇತನ, ಆಗು ನೀ ಅನಿಕೇತನ! ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ, ನಿರ್ದಿಗನ೦ತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು; ಮನೆಯನೆ೦ದೂ ಕಟ್ಟದಿರು; ಕೊನೆಯನೆ೦ದೂ ಮುಟ್ಟದಿರು; ಓ ಅನ೦ತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ! ಅನ೦ತ ತಾನ್ ಅನ೦ತವಾಗಿ ಆಗುತಿಹನೆ ನಿತ್ಯಯೋಗಿ; ಅನ೦ತ ನೀ ಅನ೦ತವಾಗು; ಆಗು, ಆಗು, ಆಗು, ಆಗು, ಓ ನನ್ನ ಚೇತನ, ಆಗು ನೀ ಅನಿಕೇತನ! ರಾಷ್ಟ್ರ ಕವಿ ಕುವೆಂಪು
ದೇಶಭಕ್ತ ಲೋಫರ್ನನ್ಮಕ್ಳು* ಗದ್ಯಕವಿತೆ
- Get link
- X
- Other Apps
*ದೇಶಭಕ್ತ ಲೋಫರ್ನನ್ಮಕ್ಳು* ನಾನು... ಅವನು ಇಬ್ಬರೂ ಚೆಡ್ಡಿ ದೋಸ್ತ್ ಗಳು ಆಗಾಗ ಏನೋ...ಸಾಬ್ರೆ ಅಂತ ಕಿಚಾಯಿಸಿದ್ದೂ ಉಂಟು... ಅದಕ್ ಅವ್ನೇನ್ ಸುಮ್ನ್ ಇರ್ತಿರ್ಲಿಲ್ಲ... ಏನ್ಲೇ ಕುರುಬಾ ಅನ್ನೋನು... ಇದು ಬರೀ ಮಾತಿಗಷ್ಟೇ.. ಅವನ್ಯಾವತ್ತೂ ಮುಸಲ್ಮಾನ ಅಂತ ನನಗ್ಯಾವತ್ತೂ ಅನ್ನಿಸಿರ್ಲಿಲ್ಲ ಧರ್ಮಬೇರೆ ಯಾದರೂ ಜೀವ ಒಂದೇ ಎನ್ನುತಿದ್ದೆವೆ... ಅವನಿಗೂ ಹಾಗೇ ಅನಿಸಿರಬೇಕು... ಅವನು ಅಲ್ಲಾನ ಬಗ್ಗೆ ಹೇಳ್ ಬೇಕಾದ್ರ ಅಲುಗಾಡದಂಗ್ ಕುಂತ್ ಕೇಳಿನಿ.. ರಾಮನ,ಬಗ್ಗೆ ಧರ್ಮನ ಬಗ್ಗೆ ಸಾಕಷ್ಟು ಕಥೆ ಹೇಳಿದ್ದೀನಿ... ಒಂದು ದಿನ ಸತ್ಯಕ್ಕೆ ಕಟ್ಟು ಬಿದ್ದ ಹರಿಶ್ಚಂದ್ರನ ಕಥೆ ಕೇಳಿ ತಲ್ಲೀಣಗೊಂಡಿದ್ದ... ಆಗಾಗ ಪೇಪರಿನಲ್ಲಿ ಬರ್ತಿದ್ದ ಹಿಂದೂ ಮುಸ್ಲಿಂ ಗಲಾಟೆ ಕೇಳಿ ಇವರ್ಯಾಕ್ ಹಿಂಗ್ ಸಾಯ್ತಾರಾ... ನಮ್ಮಂಗ್ ಇರಾಕ್ ಏನ್ ಧಾಡಿ ಆಗ್ಯಾದ್ ಅನ್ನೋಂವ... ಒಂದು ದಿನ ಇಬ್ಬರೂ ತೆಂಬಿಗಿ ಇಡ್ಕೊಂಡ್ ಬಯಲಿಗೋದಾಗ ಅಯೋಧ್ಯೆ ಬಗ್ಗೆ ಮಾತಾಡಿದ್ದೆವು...ಆಗ ಕುವೆಂಪು ಹೇಳಿದ ಮಾತು ಮರ್ತ್ ಬಿಟ್ಟಾರ್ ಗುಡಿ, ಚರ್ಚು,ಮಸೀದಿ ಬಿಟ್ಟು ಹೊರಬನ್ನಿ ಅಂತ ಆ...ಮಹಾನುಭಾವ ಹೆಳಿದ್ರ ಇವ್ರೂ ಅದುಕ್ಕೆ ಒಡ್ದಾಡ್ತಾ...ಇದ್ದಾರೆ ಮಸೀದಿ, ಗುಡಿ,ಎರ್ಡೂ ಕೆಡಿವಿ ಸುಮ್ನ್ ಒಂದ್ ಧವಾಖಾನಿ ಕಟ್ಸಿದ್ರ ಚೊಲೋ ಇರ್ತದ್ ನೋಡ್ಲೇ... ಹೌದು... ಚೊಲೋ... ಎನ್.ಆರ್.ಸಿ ಬಗ್ಗ...