ಲಂಕೇಶರ ಕವಿತೆಗಳು

ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ನೂರಾರು ವರ್ಷಗಳ
ಹಳೆ ಮನೆಯ ಬೀಳಿಸುವಾಗ
ಅಲ್ಲಿ ತೂಗಿದ ತೊಟ್ಟಿಲು,
ಪ್ರಸ್ತಗಳ
ಪ್ರಸ್ತಾಪವೇ ನಿನ್ನ ತುಂಬುವುದು
***** ಕವಿತೆಗಳುಹುಟ್ಟು ಹಠವಾದಿಯೊಬ್ಬ
ಕವಿಯಾಗಲು ಪಣತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆಯ ಕಂಠದಲ್ಲಿ ಹಾಡಿ
ತನಗೆ ಗೊತ್ತಿಲ್ಲದೆ
ಕವಿಯಾಯಿತು
ಲಕ್ಷಾಂತರ ಕವನ, ಗೀತೆ, ಪುರಾಣಗಳು
ಚುಂಬನ ಆಲಿಂಗನಗಳು
ಶ್ರದ್ಧೆ, ಭಕ್ತಿಯ ಅವಶೇಷಗಳು
ಅವನ ನಗೆಯಲ್ಲಿ
ಪ್ರತ್ಯಕ್ಷವಾಗಿ
ನಾನು ಜ್ವಾಲೆಯಾಗಿ ಉರಿಯತೊಡಗುವೆ
ನಾನು ಬಲ್ಲ ಹುಡುಗನೊಬ್ಬ
ಜನಪ್ರಿಯ ಕಾದಂಬರಿಯೊಂದರಲ್ಲಿ
ಪಾತ್ರವಾಗಿ ಓದಿಕೊಂಡಾಗಲೇ
ನನಗೆ ಅರ್ಥವಾದದ್ದು
ಸಹಸ್ರಾರು ವರ್ಷಗಳಿಂದ
ನನ್ನ ಅಂತರಂಗದಲ್ಲಿ ಸೇರಿಹೋಗಿರುವ
ಶಬ್ದ, ಚಿತ್ರ, ಅರ್ಥಗಳು
ನಿನ್ನ ಸಂಗದಲ್ಲಿ ಸಂಯೋಜನೆಗೊಂಡು
ಪ್ರೇಮ ಅನ್ನಿಸಿಕೊಂಡಿತು
ಈ ನನ್ನ ಸಾಲುಗಳನ್ನು
ಕವನಗಳೆಂದು ಹೇಗೆ ಕರೆಯಲಿ ?
ನೀನೇ ಬಲ್ಲಂತೆ ಇವೆಲ್ಲ
ವಿರಹದ, ಕಾತರದ , ನಿರಾಶೆಯ , ಚುಂಬನದ
ಆಲಿಂಗನದ ಗುರುತುಗಳು,
ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ
ನಾನು ಕತ್ತಲೆಯ ಭಿತ್ತಿಯ ಮೇಲೆ
ಚಿತ್ರಿಸಿದ ನಿಟ್ಟುಸಿರುಗಳು
*****
ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ…
ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿವ ಕೆಲಸ
ಓಯಸಿಸ್’ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ
ಎಂದೋ ಕಂಡ ಮೋಹಕ ಹೆಣ್ಣನ್ನು
‌ನೆನೆದು ದುಗುಡಗೊಳ್ಳುವ
ಗಂಡಿನಲ್ಲಿ ಎಷ್ಟು
ಸ್ವಾರ್ಥ, ಎಷ್ಟು ಪ್ರೇಮ, ಎಷ್ಟು
ಕೇವಲ ಚಪಲ ?
ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !
ವ್ಯವಹಾರ ಲೋಕದಲ್ಲಿ ಲೆಕ್ಕ
ನಿಷ್ಠೆ, ನಿಯತ್ತು ಇರುವಂತೆ
ಅನುರಾಗ ಲೋಕದಲ್ಲಿ
ಚಂಚಲತೆ, ಊಹೆ ಮತ್ತು ಕವನ
ಎಂದರೆ ನಗುವೆಯಾ ?
ಸುರಸುಂದರಿಯ ರೂಪ
ಅರಳಿದ್ದು
ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು
ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ :
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ
ಪರಿಚಯ ಮತ್ತು ಪ್ರತಿಭಟನೆಯ
ನಡುವೆ
ಹೇಗೋ ಗೂಡು ಕಟ್ಟುವ
ಹಕ್ಕಿ
ಪ್ರೇಮ
ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ :
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ
ಮೊನ್ನೆ ತುಂಬು ಸೀರೆ ಉಟ್ಟು
ಬಟ್ಟೆ ಗಿರಣಿಗಳಂತಿದ್ದ ಹುಡುಗಿಯರು
ಈಚೆಗೆ ಗಿರಣಿಗಳ ಮುಷ್ಕರದಲ್ಲಿ
ಭಾಗವಹಿಸಿದ್ದಕ್ಕೆ
ಬೇಸಿಗೆ ಕಾರಣವಿರಬಹುದೆ ?
*****
ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ದೌ”ರ್ಬಾಲ್ಯ”ದವರೆಗೂ ಜೀವನ ಪಯಣವನ್ನು ಚಲಿಸಿ ಚಲಾಯಿಸುತ್ತಾರೆ…
ಚಿಕ್ಕಂದಿನಿಂದ ಅಪ್ಪನ ಸಿಟ್ಟು
ಮಾಸ್ತರರ ರಗಳೆ
ನೆನಪಾಗದ ಪಾಠಗಳು,
ಭಯ,
ಎಲ್ಲದರ ನಡುವೆ
ಎಂಥ ಪುಲಕ ಇತ್ತು –
ಎನ್ನುವುದು ನನ್ನ ವಿಸ್ಮಯ
ಪುಟಾಣಿಯಾಗಿದ್ದಾಗ ನಾನು
ಅಚ್ಚರಯಿಂದ ದಂಗಾದದ್ದು
ಜ್ಯೋತಿಷಿಯೊಬ್ಬ
ಪುಸ್ತಕದಲ್ಲಿ ನಕ್ಷತ್ರಗಳ
ಹುಡುಕುತ್ತಿದ್ದುದ ಕಂಡು
ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ನೂರಾರು ವರ್ಷಗಳ
ಹಳೆ ಮನೆಯ ಬೀಳಿಸುವಾಗ
ಅಲ್ಲಿ ತೂಗಿದ ತೊಟ್ಟಿಲು,
ಪ್ರಸ್ತಗಳ
ಪ್ರಸ್ತಾಪವೇ ನಿನ್ನ ತುಂಬುವುದು
*****
ಹುಟ್ಟು ಹಠವಾದಿಯೊಬ್ಬ
ಕವಿಯಾಗಲು ಪಣತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆಯ ಕಂಠದಲ್ಲಿ ಹಾಡಿ
ತನಗೆ ಗೊತ್ತಿಲ್ಲದೆ
ಕವಿಯಾಯಿತು
ಲಕ್ಷಾಂತರ ಕವನ, ಗೀತೆ, ಪುರಾಣಗಳು
ಚುಂಬನ ಆಲಿಂಗನಗಳು
ಶ್ರದ್ಧೆ, ಭಕ್ತಿಯ ಅವಶೇಷಗಳು
ಅವನ ನಗೆಯಲ್ಲಿ
ಪ್ರತ್ಯಕ್ಷವಾಗಿ
ನಾನು ಜ್ವಾಲೆಯಾಗಿ ಉರಿಯತೊಡಗುವೆ
ನಾನು ಬಲ್ಲ ಹುಡುಗನೊಬ್ಬ
ಜನಪ್ರಿಯ ಕಾದಂಬರಿಯೊಂದರಲ್ಲಿ
ಪಾತ್ರವಾಗಿ ಓದಿಕೊಂಡಾಗಲೇ
ನನಗೆ ಅರ್ಥವಾದದ್ದು
ಸಹಸ್ರಾರು ವರ್ಷಗಳಿಂದ
ನನ್ನ ಅಂತರಂಗದಲ್ಲಿ ಸೇರಿಹೋಗಿರುವ
ಶಬ್ದ, ಚಿತ್ರ, ಅರ್ಥಗಳು
ನಿನ್ನ ಸಂಗದಲ್ಲಿ ಸಂಯೋಜನೆಗೊಂಡು
ಪ್ರೇಮ ಅನ್ನಿಸಿಕೊಂಡಿತು
ಈ ನನ್ನ ಸಾಲುಗಳನ್ನು
ಕವನಗಳೆಂದು ಹೇಗೆ ಕರೆಯಲಿ ?
ನೀನೇ ಬಲ್ಲಂತೆ ಇವೆಲ್ಲ
ವಿರಹದ, ಕಾತರದ , ನಿರಾಶೆಯ , ಚುಂಬನದ
ಆಲಿಂಗನದ ಗುರುತುಗಳು,
ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ
ನಾನು ಕತ್ತಲೆಯ ಭಿತ್ತಿಯ ಮೇಲೆ
ಚಿತ್ರಿಸಿದ ನಿಟ್ಟುಸಿರುಗಳು
*****
ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ…
ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿವ ಕೆಲಸ
ಓಯಸಿಸ್’ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ
ಎಂದೋ ಕಂಡ ಮೋಹಕ ಹೆಣ್ಣನ್ನು
‌ನೆನೆದು ದುಗುಡಗೊಳ್ಳುವ
ಗಂಡಿನಲ್ಲಿ ಎಷ್ಟು
ಸ್ವಾರ್ಥ, ಎಷ್ಟು ಪ್ರೇಮ, ಎಷ್ಟು
ಕೇವಲ ಚಪಲ ?
ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !
ವ್ಯವಹಾರ ಲೋಕದಲ್ಲಿ ಲೆಕ್ಕ
ನಿಷ್ಠೆ, ನಿಯತ್ತು ಇರುವಂತೆ
ಅನುರಾಗ ಲೋಕದಲ್ಲಿ
ಚಂಚಲತೆ, ಊಹೆ ಮತ್ತು ಕವನ
ಎಂದರೆ ನಗುವೆಯಾ ?
ಸುರಸುಂದರಿಯ ರೂಪ
ಅರಳಿದ್ದು
ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು
ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ :
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ
ಪರಿಚಯ ಮತ್ತು ಪ್ರತಿಭಟನೆಯ
ನಡುವೆ
ಹೇಗೋ ಗೂಡು ಕಟ್ಟುವ
ಹಕ್ಕಿ
ಪ್ರೇಮ
ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ :
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ
ಮೊನ್ನೆ ತುಂಬು ಸೀರೆ ಉಟ್ಟು
ಬಟ್ಟೆ ಗಿರಣಿಗಳಂತಿದ್ದ ಹುಡುಗಿಯರು
ಈಚೆಗೆ ಗಿರಣಿಗಳ ಮುಷ್ಕರದಲ್ಲಿ
ಭಾಗವಹಿಸಿದ್ದಕ್ಕೆ
ಬೇಸಿಗೆ ಕಾರಣವಿರಬಹುದೆ ?
*****
ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ದೌ”ರ್ಬಾಲ್ಯ”ದವರೆಗೂ ಜೀವನ ಪಯಣವನ್ನು ಚಲಿಸಿ ಚಲಾಯಿಸುತ್ತಾರೆ…
ಚಿಕ್ಕಂದಿನಿಂದ ಅಪ್ಪನ ಸಿಟ್ಟು
ಮಾಸ್ತರರ ರಗಳೆ
ನೆನಪಾಗದ ಪಾಠಗಳು,
ಭಯ,
ಎಲ್ಲದರ ನಡುವೆ
ಎಂಥ ಪುಲಕ ಇತ್ತು –
ಎನ್ನುವುದು ನನ್ನ ವಿಸ್ಮಯ
ಪುಟಾಣಿಯಾಗಿದ್ದಾಗ ನಾನು
ಅಚ್ಚರಯಿಂದ ದಂಗಾದದ್ದು
ಜ್ಯೋತಿಷಿಯೊಬ್ಬ
ಪುಸ್ತಕದಲ್ಲಿ ನಕ್ಷತ್ರಗಳ
ಹುಡುಕುತ್ತಿದ್ದುದ ಕಂಡು
ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ನೂರಾರು ವರ್ಷಗಳ
ಹಳೆ ಮನೆಯ ಬೀಳಿಸುವಾಗ
ಅಲ್ಲಿ ತೂಗಿದ ತೊಟ್ಟಿಲು,
ಪ್ರಸ್ತಗಳ
ಪ್ರಸ್ತಾಪವೇ ನಿನ್ನ ತುಂಬುವುದು

*****

Comments

Popular posts from this blog

ಹುಟ್ಟು ಮತ್ತು ಸಾವುಗಳ ನಡುವೆ...

ಕಥಾ ಸಂವಿಧಾನ

ದೇಶವೆಂದರೆ