ದೇಶಭಕ್ತ ಲೋಫರ್ನನ್ಮಕ್ಳು* ಗದ್ಯಕವಿತೆ

*ದೇಶಭಕ್ತ ಲೋಫರ್ನನ್ಮಕ್ಳು* 

ನಾನು...
ಅವನು ಇಬ್ಬರೂ
ಚೆಡ್ಡಿ ದೋಸ್ತ್ ಗಳು
ಆಗಾಗ ಏನೋ...ಸಾಬ್ರೆ ಅಂತ ಕಿಚಾಯಿಸಿದ್ದೂ ಉಂಟು...
ಅದಕ್ ಅವ್ನೇನ್ ಸುಮ್ನ್ 
ಇರ್ತಿರ್ಲಿಲ್ಲ...
ಏನ್ಲೇ ಕುರುಬಾ ಅನ್ನೋನು...
ಇದು ಬರೀ ಮಾತಿಗಷ್ಟೇ..
ಅವನ್ಯಾವತ್ತೂ ಮುಸಲ್ಮಾನ ಅಂತ ನನಗ್ಯಾವತ್ತೂ ಅನ್ನಿಸಿರ್ಲಿಲ್ಲ
ಧರ್ಮಬೇರೆ ಯಾದರೂ ಜೀವ ಒಂದೇ ಎನ್ನುತಿದ್ದೆವೆ...
ಅವನಿಗೂ ಹಾಗೇ ಅನಿಸಿರಬೇಕು...

ಅವನು ಅಲ್ಲಾನ ಬಗ್ಗೆ ಹೇಳ್ ಬೇಕಾದ್ರ ಅಲುಗಾಡದಂಗ್ ಕುಂತ್ ಕೇಳಿನಿ..
ರಾಮನ,ಬಗ್ಗೆ ಧರ್ಮನ ಬಗ್ಗೆ ಸಾಕಷ್ಟು ಕಥೆ ಹೇಳಿದ್ದೀನಿ...
ಒಂದು ದಿನ ಸತ್ಯಕ್ಕೆ ಕಟ್ಟು ಬಿದ್ದ ಹರಿಶ್ಚಂದ್ರನ ಕಥೆ ಕೇಳಿ ತಲ್ಲೀಣಗೊಂಡಿದ್ದ...

ಆಗಾಗ ಪೇಪರಿನಲ್ಲಿ ಬರ್ತಿದ್ದ ಹಿಂದೂ ಮುಸ್ಲಿಂ  ಗಲಾಟೆ ಕೇಳಿ 
ಇವರ್ಯಾಕ್ ಹಿಂಗ್ ಸಾಯ್ತಾರಾ...
ನಮ್ಮಂಗ್ ಇರಾಕ್ ಏನ್ ಧಾಡಿ ಆಗ್ಯಾದ್ ಅನ್ನೋಂವ...

ಒಂದು ದಿನ ಇಬ್ಬರೂ 
ತೆಂಬಿಗಿ ಇಡ್ಕೊಂಡ್ ಬಯಲಿಗೋದಾಗ ಅಯೋಧ್ಯೆ ಬಗ್ಗೆ ಮಾತಾಡಿದ್ದೆವು...ಆಗ ಕುವೆಂಪು ಹೇಳಿದ ಮಾತು ಮರ್ತ್ ಬಿಟ್ಟಾರ್ 
ಗುಡಿ, ಚರ್ಚು,ಮಸೀದಿ ಬಿಟ್ಟು ಹೊರಬನ್ನಿ ಅಂತ ಆ...ಮಹಾನುಭಾವ ಹೆಳಿದ್ರ ಇವ್ರೂ ಅದುಕ್ಕೆ ಒಡ್ದಾಡ್ತಾ...ಇದ್ದಾರೆ
ಮಸೀದಿ, ಗುಡಿ,ಎರ್ಡೂ ಕೆಡಿವಿ ಸುಮ್ನ್ ಒಂದ್ ಧವಾಖಾನಿ ಕಟ್ಸಿದ್ರ ಚೊಲೋ ಇರ್ತದ್ ನೋಡ್ಲೇ...
ಹೌದು... ಚೊಲೋ...

ಎನ್.ಆರ್.ಸಿ ಬಗ್ಗೆ ಕೇಳಿದಾಗಂತೂ ಹುಡುಗ ನೀರಸಗೊಂಡಿದ್ದ
ಅಲ್ಲೋ...ಯಾವಾಗಿಂದೋ...ಆಧಾರ ಕೇಳಿದ್ರ ಎಲ್ಲಿಂದ ಕೊಡ್ಲೋ...ನಾನು 
ನಮ್ ಚಾಚಂದು ಮುತ್ತೇನ್ ಐತಿ ನಮ್ಮತ್ರ ಕೊಡ್ಲಾಕಾ...
ದೇಶ ಬಿಟ್ಟೋಗ ಪರಿಸ್ಥಿತಿ ಬಂದ್ರ...ನೀನೂ ಬಾರೋ...ದೇಶ ಯಾಕ್ ಬಿಡೋಣೋ...ಅದರ್ ವಿರುದ್ಧ ದ್ವನಿ ಎತ್ತೋಣ
ಅಂತ್ ಹೇಳಿ ಸುಮ್ನಿರಿಸಿದ್ಯಾ...

ನಮ್ಮಿಬ್ಬರನ್ನು ಒಂದಾಗಿ ಬಿಡೋಲ್ಲ ಅನಿಸುತ್ತೆ 
ಈ...ದೇಶಭಕ್ತ ಲೋಫರ್    ನನ್ಮಕ್ಳು...
ಈಗ ಕರೋನ ತಂದೋರು ಸಾಬ್ರಂತ ಹೇಳಿ...ನನ್ ದೋಸ್ತನ್ ಮನಸೀಗಿ ಗಾಯ ಮಾಡಿ ಕುಂತಾರ...


 *ಎಂ.ಕೆ.ಕೆಂಭಾವಿ

Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...