ಹಿಂದಿ ಭಾಷಾ ಹಿನ್ನೆಲೆ
ಇತ್ತೀಚೆಗೆ ಹಿಂದಿ ಭಾಷೆ ಅನ್ನುವುದು ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಅದು ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆಗೆ ವ್ಯಕ್ತವಾದ ವಿರೋಧ ಆಗಿರಬಹುದು ಅಥವ ಸರ್ಕಾರಿ ಬ್ಯಾಂಕು ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಅಧಿಕಾರಿಗಳ ಕಿರಿಕಿರಿ ಇರಬಹುದು, ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮುದ್ರಣವಾಗಿದ್ದರ ಬಗ್ಗೆ ಇರಬಹುದು ಅಥವ ಕೇಂದ್ರ ಸರ್ಕಾರ ಹಿಂದಿ ಬಳಕೆ ಬಗ್ಗೆ ತೋರುತ್ತಿರುವ ಅತಿ ಉತ್ಸಾಹವೇ ಇರಬಹುದು, ಒಟ್ಟಿನಲ್ಲಿ ಕನ್ನಡಿಗರಲ್ಲಿ ಮತ್ತು ಒಂದುಮಟ್ಟಿಗೆ ಇಡೀ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಹಿಂದಿ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ ಹಿಂದಿ ಭಾಷೆ, ಅದರ ಇತಿಹಾಸ, ಸಾಹಿತ್ಯ, ವ್ಯಾಪಕತೆ ಮತ್ತು ಮಹತ್ವದ ಬಗ್ಗೆ ಸ್ಪೆಷಲ್ ರಿಪೋರ್ಟರ್ ನಿಂದ ಒಂದು ವಿಶೇಷ ವರದಿ. ಭಾರತ ಹಲವು ಭಾಷೆಗಳ ದೇಶ. ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ, ಒಟ್ಟಾರೆ 22 ಅಧಿಕೃತ ಭಾಷೆಗಳಿವೆ. ಇವಲ್ಲದೆ ದೇಶದಲ್ಲಿ 1600ಕ್ಕೂ ಹೆಚ್ಚು ಉಪಭಾಷೆಗಳಿವೆ. ಭಾರತದ ಸಂವಿಧಾನ ಯಾವುದೇ ಭಾಷೆಯನ್ನು ಭಾರತದ ರಾಷ್ಟ್ರಭಾಷೆ ಎಂದು ಗುರುತಿಸಿಲ್ಲ, ಹೀಗಾಗಿ ಹಿಂದಿ, ಭಾರತದ ರಾಷ್ಟ್ರ ಭಾಷೆಯಲ್ಲ. ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕೆಲವರು ಅದನ್ನು ಹಿಂದಿಯನ್ನು ರಾಷ್ಟ್ರಭಾಷೆ ಎಂದು ತಪ್ಪಾಗಿ ಹೇಳುತ