ಲಂಕೇಶರ ಕವಿತೆಗಳು
ನಡುರಾತ್ರಿಯ ಕನಸು ನನಗೆ ಕಂಪನ ತರುವುದು ನೂರಾರು ವರ್ಷಗಳ ಹಳೆ ಮನೆಯ ಬೀಳಿಸುವಾಗ ಅಲ್ಲಿ ತೂಗಿದ ತೊಟ್ಟಿಲು, ಪ್ರಸ್ತಗಳ ಪ್ರಸ್ತಾಪವೇ ನಿನ್ನ ತುಂಬುವುದು ***** ಕವಿತೆಗಳುಹುಟ್ಟು ಹಠವಾದಿಯೊಬ್ಬ ಕವಿಯಾಗಲು ಪಣತೊಟ್ಟು ನಿತ್ಯ ಪದಭೇದಿಯಲ್ಲಿ ಬಳಲಿ ಹಲ್ಲು ಕಡಿಯುತ್ತಿದ್ದಾಗ ವಸಂತದ ಮಾವಿನ ಮರ ಕೋಗಿಲೆಯ ಕಂಠದಲ್ಲಿ ಹಾಡಿ ತನಗೆ ಗೊತ್ತಿಲ್ಲದೆ ಕವಿಯಾಯಿತು ಲಕ್ಷಾಂತರ ಕವನ, ಗೀತೆ, ಪುರಾಣಗಳು ಚುಂಬನ ಆಲಿಂಗನಗಳು ಶ್ರದ್ಧೆ, ಭಕ್ತಿಯ ಅವಶೇಷಗಳು ಅವನ ನಗೆಯಲ್ಲಿ ಪ್ರತ್ಯಕ್ಷವಾಗಿ ನಾನು ಜ್ವಾಲೆಯಾಗಿ ಉರಿಯತೊಡಗುವೆ ನಾನು ಬಲ್ಲ ಹುಡುಗನೊಬ್ಬ ಜನಪ್ರಿಯ ಕಾದಂಬರಿಯೊಂದರಲ್ಲಿ ಪಾತ್ರವಾಗಿ ಓದಿಕೊಂಡಾಗಲೇ ನನಗೆ ಅರ್ಥವಾದದ್ದು ಸಹಸ್ರಾರು ವರ್ಷಗಳಿಂದ ನನ್ನ ಅಂತರಂಗದಲ್ಲಿ ಸೇರಿಹೋಗಿರುವ ಶಬ್ದ, ಚಿತ್ರ, ಅರ್ಥಗಳು ನಿನ್ನ ಸಂಗದಲ್ಲಿ ಸಂಯೋಜನೆಗೊಂಡು ಪ್ರೇಮ ಅನ್ನಿಸಿಕೊಂಡಿತು ಈ ನನ್ನ ಸಾಲುಗಳನ್ನು ಕವನಗಳೆಂದು ಹೇಗೆ ಕರೆಯಲಿ ? ನೀನೇ ಬಲ್ಲಂತೆ ಇವೆಲ್ಲ ವಿರಹದ, ಕಾತರದ , ನಿರಾಶೆಯ , ಚುಂಬನದ ಆಲಿಂಗನದ ಗುರುತುಗಳು, ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ ನಾನು ಕತ್ತಲೆಯ ಭಿತ್ತಿಯ ಮೇಲೆ ಚಿತ್ರಿಸಿದ ನಿಟ್ಟುಸಿರುಗಳು ***** ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ… ನಾವು ಪ್ರೀತಿಸುವ ವ್ಯಕ್ತಿಯಲ್ಲಿ ತಪ್ಪು ಕಂಡು ಹಿಡಿವ ಕೆಲಸ ಓಯಸಿಸ್’ನ...