ನೀಲು ನನ್ನ ಸಾಹಿತ್ಯದ ಬಹುಪಾಲು...

ನೀಲು ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. ನೀಲು ಎಂಬ ಈ ಕಿರು ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ. ದಿನಕ್ಕೆ ಒಂದಾದರು ನೀಲು ಕವಿತೆ ಓದಿದಾಗ ಮಾತ್ರ ನನಗೆ ಸಮಾಧಾನ ಸಿಗೋದು....ಎನ್ನುವಷ್ಟರ ಮಟ್ಟಿಗೆ ನನ್ನೊಂದಿಗೆ ನೀಲು ಆವರಿಸಿದ್ದಾಳೆ... ಈ ಕವಿತೆಯನ್ನು ನಾನಷ್ಟೆ ಇಷ್ಟ ಪಡುತ್ತೇನಾ? ಇಲ್ಲ. ಓದಿದ ಪ್ರತಿಯೊಬ್ಬರು ನೀಲುವನ್ನು ಮೆಚ್ಚಿದ್ದಾರೆ ಹಾಗೆಯೇ ಮೆಚ್ಚುತ್ತಾರೆ ಎನ್ನುವ ಭರವಸೆಯೂ ಇದೆ. ಲಂಕೇಶರು ಪತ್ರಿಕೆ ನಡೆಸುತಿದ್ದಾಗ ದಿನಕ್ಕೊಂದು ನೀಲು ಕವಿತೆ ಅಚ್ಚು ಮಾಡುತಿದ್ದರು. ಎಷ್ಟೋ ಜನ ಈ ಕವಿತೆಗಾಗಿಯೇ ಪತ್ರಿಕೆ ಓದಿದ ಉದಾಹರಣೆಗಳು ಇವೆ. ಹೊಸದೊಂದು ಓದುಗ ವರ್ಗವನ್ನೇ ಸೃಷ್ಟಿಸಿದ ಕೀರ್ತೀ ಲಂಕೇಶರ ನೀಲುವಿಗೆ ಸಲ್ಲುತ್ತದೆ. ಬರಿ ಓದುಗ ವರ್ಗವನ್ನಷ್ಟೇ ಅಲ್ಲ ಎಷ್ಟೋ ಯುವ ಕವಿ / ಕವಯಿತ್ರಿಯರನ್ನೂ ಸೃಷ್ಟಿಸಿದೆ. *ಏನಿದೆ ಈ ನೀಲುವಿನಲ್ಲಿ :* ನನಗೆ ನಾನೆ ಈ ಪ್ರಶ್ನೆಯನ್ನ ಹಾಕಿಕೊಂಡರು ಬೇರೆಯವರು ಈ ಪ್ರಶ್ನೆ ಹಾಕಿದರು ನನ್ನ ಉತ್ತರ....ಏನಿಲ್ಲ ಎನ್ನುವ ಮರು ಪ್ರಶ್ನೆಯೇ...!! ನೀಲು ಬಹಳ ಸರಳವಾಗಿ ಮೂಡಿಬಂದ ಸಾಲುಗಳು...ಇದರಲ್ಲಿ ಒಳಾರ್...