ರೈತ ಆಂದೋಲನ ಐದು ವರ್ಷ ಮುಂದುವರೆಯಬಹುದು : ರಾಕೇಶ್ ಟಿಕಾಯತ್ , ರೈತ ಹೋರಾಟಗಾರ

ಕಳೆದ ಐದು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟವು ಮುಂದಿನ ಐದು ವರ್ಷಗಳವರೆಗೆ ಮುಂದುವರೆಯಬಹುದು ಎಂದು ಹೇಳಿರುವ ರೈತ ಮುಖಂಡ ರಾಕೇಶ್ ಟಿಕಾಯತ್, `ರೈತರು ಆಂದೋಲನವನ್ನು ತಮ್ಮ ದಿನನಿತ್ಯ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. ರೈತ ಹೋರಾಟವನ್ನು ಬೆಂಬಲಿಸಿ ಹಿಸ್ಸಾರ್‌ನಲ್ಲಿ ಫೆಬ್ರವರಿ 3ರಿಂದ ವಕೀಲರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿದ್ದ ಟಿಕಾಯತ್ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. `ಇದು ದೊಡ್ಡ ಆಂದೋಲನವೇ? ನಾವು ಕಳೆದ ಐದು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅವರು ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸಲು ಸಾಧ್ಯವಾದರೇ, ಆಂದೋಲವನ್ನು ಐದು ವರ್ಷ ಮುಂದುವರೆಸಲು ಏಕೆ ಸಾಧ್ಯವಿಲ್ಲ? ನಮ್ಮ ಆಂದೋಲನವೂ ಐದು ವರ್ಷಗಳವರೆಗೆ ಮುಂದುವರೆಯುತ್ತದೆ’ ಎಂದು ಮಾಧ್ಯಮದವರಿಗೆ ತಿಳಿಸಿದರು. `ಈ ಆಂದೋಲನವು ಇಡೀ ದೇಶದಲ್ಲಿ ಇನ್ನಷ್ಟು ಬಲಿಷ್ಠವಾಗಿ ಮುಂದುವರೆಯುತ್ತದೆ. ರೈತರು ತಮ್ಮ ಕೃಷಿ ಭೂಮಿ ಮತ್ತು ಆಂದೋಲನ ಎರಡರ ಬಗ್ಗೆಯೂ ಗಮನಹರಿಸಬೇಕು. ಅವರು ಕೃಷಿಯನ್ನು ಮಾಡಬೇಕು, ಹೋರಾಟದಲ್ಲಿಯೂ ಭಾಗವಹಿಸಬೇಕು’ ಎಂದರು. ಹಿಸ್ಸಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ನಡೆದ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್ ಹೋರಾಟ ಮುಂದುವರೆಯುವುದಾಗಿ ಭಾವನೆ ವ್ಯಕ್ತಪಡಿಸಿದ್ದಾರೆ. ರೈತ ಹೋ...